-->
ಮಂದಾರ್ತಿ ಜಾತ್ರೆ ಹಿನ್ನೆಲೆ: ಫೆ.13ರಿಂದ ಫೆ.16ರವರೆಗೆ ಮದ್ಯ ಮಾರಾಟ ಬಂದ್

ಮಂದಾರ್ತಿ ಜಾತ್ರೆ ಹಿನ್ನೆಲೆ: ಫೆ.13ರಿಂದ ಫೆ.16ರವರೆಗೆ ಮದ್ಯ ಮಾರಾಟ ಬಂದ್


ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆ. 13ರ ಬೆಳಗ್ಗೆ 6ಗಂಟೆಯಿಂದ ಫೆ. 16ರ ಬೆಳಗ್ಗೆ 6ಗಂಟೆವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಮಂದಾರ್ತಿ ದೇವಸ್ಥಾನದ ವಾರ್ಷಿಕ ಮಹೋತ್ಸವವು ಫೆಬ್ರವರಿ 10 ರಿಂದ ಫೆಬ್ರವರಿ 16ರ ವರೆಗೆ ನಡೆಯಲಿದೆ. ಫೆಬ್ರವರಿ 13ರಂದು ಕೆಂಡಸೇವೆ ಮತ್ತು ಫೆಬ್ರವರಿ 14ರಂದು ಮಹಾರಥೋತ್ಸವ ನಡೆಯಲಿದೆ. ಜಾತ್ರೆ ಹಾಗೂ ಕೆಂಡ ಸೇವೆ ನಡೆಯುವ ಈ ಸಮಯದಲ್ಲಿ ಬಾರ್ ಮತ್ತು ವೈನ್‍ಶಾಪ್‍ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ, ಗಲಭೆ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ, ಹೆಗ್ಗುಂಜೆ ಗ್ರಾಮ ಹಾಗೂ 33 ನೇ ಶಿರೂರು ಗ್ರಾಮದ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್, ವೈನ್‍ಶಾಪ್‍ಗಳ ಮದ್ಯ ಮಾರಾಟವನ್ನು ಫೆಬ್ರವರಿ 13 ರ ಸಂಜೆ 6 ರಿಂದ ಫೆಬ್ರವರಿ 16 ರ ರಾತ್ರಿ 12 ಗಂಟೆಯವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article