-->
 21 ವರ್ಷದ ಯೂಟ್ಯೂಬರ್ ಯುವತಿ ಆತ್ಮಹತ್ಯೆ

21 ವರ್ಷದ ಯೂಟ್ಯೂಬರ್ ಯುವತಿ ಆತ್ಮಹತ್ಯೆ


21 ವರ್ಷದ ಯೂಟ್ಯೂಬರ್ ಹಾಗೂ ವಿದ್ಯಾರ್ಥಿನಿ ಬಾನು ಕೋಮಾಲಿ ಸೋಮವಾರ ತೆಲಂಗಾಣದ ಹೈದರಾಬಾದ್ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಈಕೆ ತನ್ನ ತಾಯಿಗೆ “ಐ ಲವ್ ಯು ಸೋ ಮಚ್” ಎಂದು ಸಂದೇಶ ಕಳುಹಿಸಿದ ಸ್ವಲ್ಪ ಸಮಯದಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಕೋಮಲಿ, ಹೈದರಾಬಾದ್ ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ಸುಮಾರು 11 ತಿಂಗಳುಗಳಿOದ ಅಪಾರ್ಟ್ಮೆಂಟ್ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು. ಯುಟ್ಯೂಬ್ ನಲ್ಲಿ ತನ್ನ ಜೀವನ ಮತ್ತು ದೈನಂದಿನ ದಿನಚರಿಗಳ ಕುರಿತಂತೆ ವಿಡಿಯೋ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಸೋಮವಾರ ಮುಂಜಾನೆ ಕೋಮಾಲಿ ಕುವೈಟ್ ನಲ್ಲಿರುವ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿಗೆ “ಐ ಲವ್ ಯು ಮಮ್ಮಿ” ಎಂದು ಸಂದೇಶ ಕಳುಹಿಸಿದ್ದಾಳೆ. ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಪದೇ ಪದೇ ಕರೆಗಳು ಉತ್ತರಿಸದೇ ಹೋದಾಗ, ಆಕೆಯ ತಾಯಿ ಕೋಮಾಲಿ ಸ್ನೇಹಿತರಿಗೆ ಮಾಹಿತಿ ತಿಳಿಸಿ ಪ್ಲ್ಯಾಟ್ ಗೆ ತೆರಳಲು ಹೇಳಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆಗೆ ಆಕೆ ಸ್ನೇಹಿತರು ಬಂದು ಪ್ಲ್ಯಾಟ್ ನ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಓಡೆದು ನೋಡಿದಾಗಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡುಬOದಿದೆ.

ಕೋಮಲಿ 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಮತ್ತು ಸಹ ಯೂಟ್ಯೂಬರ್ ಜೊತೆ ಮೂರು ವರ್ಷಗಳ ಸಂಬOಧ ಹೊಂದಿದ್ದರು, ಆದರೆ ಯಾವುದೋ ಕಾರಣಕ್ಕೆ ಇಬ್ಬರು ಬೆರೆಯಾಗಿದ್ದರು. ಅಲ್ಲದೆ ಸುಮಾರು ಆರು ತಿಂಗಳ ಹಿಂದೆ ಕೋಮಲಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. 

Ads on article

Advertise in articles 1

advertising articles 2

Advertise under the article