-->
 ಆಸ್ಟ್ರೋ ಮೋಹನ್ ಗೆ ಅಮೆರಿಕಾ ಫೋಟೋಗ್ರಫಿ ಸೊಸೈಟಿಯಿಂದ ಪ್ರಶಂಸಾ ಪತ್ರ

ಆಸ್ಟ್ರೋ ಮೋಹನ್ ಗೆ ಅಮೆರಿಕಾ ಫೋಟೋಗ್ರಫಿ ಸೊಸೈಟಿಯಿಂದ ಪ್ರಶಂಸಾ ಪತ್ರ


ಉಡುಪಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ಕೊಲ್ಕೊತ್ತಾದ ಶಾಂತಿನಿಕೇತನದಲ್ಲಿ ಫೆ. 5 ರಿಂದ 7 ರವರಗೆ ಆಯೋಜಿಸಲಾಗಿದ್ದ ಅಮೆರಿಕದ ಫೋಟೋಗ್ರಫಿ ಸೊಸೈಟಿ (ಪಿಎಸ್‌ಎ)ಯ ಮೊದಲ ಫೋಟೋ ಔಟಿಂಗ್‌ನ ಸಮಾರೋಪ ಸಮಾರಂಭದಲಿ ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. 

ಗೌರವವನ್ನು ಅಮೆರಿಕದ ಫೋಟೋಗ್ರಫಿ ಸೊಸೈಟಿಯ ಸದಸ್ಯತ್ವ ವಿಭಾಗದ ಉಪಾಧ್ಯಕ್ಷ ಲೂಯಿಸ್ ಚೋಯಿ ಅವರು, ಕಾರ್ಯಕ್ರಮದ ಆಯೋಜಕ ತೀರ್ಥದಾಸ್ ಗುಪ್ತ ಅವರ ಸಮಕ್ಷಮ ಪ್ರದಾನಿಸಿದರು. ಫೋಟೋಗ್ರಫಿ ಸಮುದಾಯಕ್ಕೆ ಆಸ್ಟ್ರೋ ಮೋಹನ್ ಅವರು ಸಲ್ಲಿಸಿರುವ ನಿಷ್ಠಾವಂತ ಸೇವೆ ಹಾಗೂ ನಿರಂತರ ಕೊಡುಗೆಗಳ ಮಾನ್ಯತೆಯಾಗಿ ಈ ಗೌರವ ನೀಡಲಾಯಿತು.


Ads on article

Advertise in articles 1

advertising articles 2

Advertise under the article