-->
 ಅಗಲಿದ ಪತ್ರಕರ್ತ ಶೇಷಗಿರಿ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆ

ಅಗಲಿದ ಪತ್ರಕರ್ತ ಶೇಷಗಿರಿ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆ


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ಅಗಲಿದ ಸಂಘದ ಸದಸ್ಯ ಹಾಗೂ ಬ್ರಹ್ಮಾವರ ತಾಲೂಕು ಸಂಘದ ಉಪಾಧ್ಯಕ್ಷ ಮತ್ತು ಪ್ರಜಾವಾಣಿ ಪತ್ರಿಕೆಯ ಬ್ರಹ್ಮಾವರ ವರದಿಗಾರ ಶೇಷಗಿರಿ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.


ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಮಾತನಾಡಿ, ಸೌಮ್ಯ ಸ್ವಭಾವದ ಉತ್ತಮ ಬರಹಗಾರರಾಗಿದ್ದ ಶೇಷಗಿರಿ ಭಟ್, ಪತ್ರಕರ್ತರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಮ್ಮ ಸಂಘದ ಹಿರಿಯ ಸದಸ್ಯರು. ತಾಲೂಕು ಸಂಘದಲ್ಲಿ ಪದಾಧಿಕಾರಿಯಾಗಿದ್ದ ಇವರ, ಅಗಲಿಕೆ, ನಮ್ಮ ಸಂಘಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಹೇಳಿದರು.


ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ಹಿರಿಯ ಪತ್ರಕರ್ತರಾದ ಕಿರಣ್ ಮಂಜನಬೈಲು, ಬಿ.ಬಿ.ಶೆಟ್ಟಿಗಾರ್, ಶಶಿಧರ್ ಮಾಸ್ತಿಬೈಲು, ನವೀನ್ ಕುಮಾರ್, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ನುಡಿನಮನ ಸಲ್ಲಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರೂಪಿಸಿದರು. 

ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಸುವರ್ಣ, ಕಾರ್ಯದರ್ಶಿಗಳಾದ ಉಮೇಶ್ ಮಾರ್ಪಳ್ಳಿ, ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಸಮಿತಿ ಸದಸ್ಯ ಅಜಿತ್ ಆರಾಡಿ, ಮೋಹನ್ ಉಡುಪ, ಪ್ರವೀಣ್ ಮುದ್ದೂರು ಮೊದಲಾದವರು ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article