ಪೆರ್ಡೂರು ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ಸೊರಕೆಯಿಂದ ಶಾಸಕರ ತೇಜೋವಧೆ: ಸುರೇಶ್ ಶೇರ್ವೆಗಾರ್(Video)
ಉಡುಪಿಯ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ವಿನಯ ಕುಮಾರ್ ಸೊರಕೆ ಅವರು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ತೇಜೋವಧೆ ಮಾಡುತ್ತಿದ್ದು, ಸೊರಕೆ ಅವರ ಹೇಳಿಕೆಗಳೆಲ್ಲಾ ಸುಳ್ಳು ಎಂದು ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಸುರೇಶ್ ಶೇರ್ವೆಗಾರ್ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಶಾಸಕರು ಹೈಕೋರ್ಟಿನಿಂದ ತಡೆ ತಂದಿದ್ದಾರೆ ಎಂಬ ಸೊರಕೆ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಜೀರ್ಣೋದ್ಧಾರ ಸಮಿತಿಯನ್ನು ಸಕಾರಣವಿಲ್ಲದೆ ಬರಕಾಸ್ತು ಮಾಡುವ ಮೂಲಕ ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆರೋಪಿಸಿದರು.
ದೇವಸ್ಥಾನದ ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಅನೇಕ ಬಾರಿ ಅಡ್ಡಿಪಡಿಸಿದ್ದಾರೆ. ಹಿಂದಿನ ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣದ್ದಾರ ಸಮಿತಿ ವತಿಯಿಂದ ಸುಮಾರು 30 ರಿಂದ 50 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರದ ಯೋಜನೆ ಹಾಕಿಕೊಳ್ಳಲಾಗಿತ್ತು. ಯೋಜನೆಗೆ ಬೇಕಾದ ಪ್ರಾಥಮಿಕ ಸಿದ್ಧತೆಗಾಗಿ ಸಮಿತಿಯು ಸ್ವತಃ 10 ಲಕ್ಷ ರೂ. ಖರ್ಚು ಮಾಡಿದೆ. ಗ್ರಾಮಸ್ಥರ ಸಭೆಯಲ್ಲಿ ಭಕ್ತರು ಸುಮಾರು 3 ಕೋಟಿ ರೂ. ದೇಣಿಗೆ ನೀಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮೂರು ವರ್ಷದ ಅವಧಿಗೆ ಆಯ್ಕೆಯಾಗಿದ್ದ ಜೀರ್ಣದ್ದಾರ ಸಮಿತಿಯನ್ನು ರದ್ದು ಪಡಿಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಆದರೆ ಕಾಂಗ್ರೆಸ್ ನಾಯಕರು ಕೋರ್ಟ್ಎ ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿ ಸ್ಟೇ ತಂದಿದ್ದರು. 2 ವರ್ಷಗಳ ವಿಚಾರಣೆ ನಂತರ ಜನವರಿ 4ರಂದು ನಮ್ಮ ಸಮಿತಿ 3 ವರ್ಷದ ಅವಧಿ ಮುಗಿದ ಕಾರಣ ಹೈಕೋರ್ಟು ಅರ್ಜಿಯನ್ನು ವಜಾಗೊಳಿಸಿದೆ. ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಸಮಿತಿಯನ್ನು ರದ್ದು ಪಡಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂಬುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ರಾಜಕೀಯವನ್ನು ಎಳೆದು ತಂದು ಅಡ್ಡಿಪಡಿಸುತ್ತಿರುವುದು ಕಾಂಗ್ರೆಸ್ ನಾಯಕರು. ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿದವರು ಈಗ ಶಾಸಕರ ತೇಜೋವಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ಜೀ ಸರ್ಕಾರ ಅಧಿಕಾರಕ್ಕೆ ಬಂದಾಗ ಹಳೆಯ ಜೀರ್ಣೋದ್ಧಾರ ಸಮಿತಿಯಲ್ಲಿದ್ದ ಸದಸ್ಯರನ್ನು ಕೈಬಿಟ್ಟಿರುವುದಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇದಕ್ಕೆ ಕೋರ್ಟ್ರ್ಣೋ ಗೆ ಹೋಗಿ ಸ್ಟೇ ತಂದವರು ಕಾಂಗ್ರೇಸ್ ನಾಯಕರೇ ಹೊರಟು ಶಾಸಕರಲ್ಲ. ಇದಕ್ಕೆ ಬೇಕಾದ ದಾಖಲೆಗಳಿವೆ. ಸೊರಕೆ ಅವರಲ್ಲೂ ದಾಖಲೆಗಳಿದ್ದರೆ ಅದನ್ನು ತೋರಿಸಲಿ. ದೇವಸ್ಥಾನಕ್ಕೆ ಅವರು ಬರಲಿ ನಾವು ಬರುತ್ತೇವೆ. ದೇವರ ಎದುರೇ ಇತ್ಯರ್ಥವಾಗಲಿ ಎಂದರು.
ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಜಿ ಎನ್ ಆರ್ ಹೆಗ್ಡೆ, ದೇವು ಪೂಜಾರಿ, ಸುಧಾಕರ ಶೆಟ್ಟಿ, ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.
