ಏ.18: ಕೊಡವೂರು ಜುಮಾದಿ ನಗರದ ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ
Tuesday, April 14, 2026
ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದ ಜುಮಾದಿನಗರದ ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರದಂದು ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಜುಮಾಧಿನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ ಮೂಹೂರ್ತ, ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ 3:30ಕ್ಕೆ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಭಜನಾ ತಂಡಗಳು, ಚೆಂಡೆ, ಡೋಲು ಹಾಗೂ ತಾಳಮದ್ದಳೆಗಳೊಂದಿಗೆ "ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ" ನಡೆಯಲಿದೆ.
ರಾತ್ರಿ 8:30 ರಿಂದ ಶ್ರೀ ಪಂಚಧೂಮಾವತಿ ಬಂಟ ದೈವಗಳ ವೈಭವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.