-->
ನಾಯಿ ಅಡ್ಡ ಬಂದು ಉರುಳಿ ಬಿದ್ದ ರಿಕ್ಷಾ: ಚಾಲಕ ಸಾವು

ನಾಯಿ ಅಡ್ಡ ಬಂದು ಉರುಳಿ ಬಿದ್ದ ರಿಕ್ಷಾ: ಚಾಲಕ ಸಾವು


ನಾಯಿ ಅಡ್ಡ ಬಂದು ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಉರುಳಿಬಿದ್ದು ಚಾಲಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಅಳದಂಗಡಿಯಲ್ಲಿ ನಡೆದಿದೆ.

ಮೃತರನ್ನು ನಾವರ ಗ್ರಾಮದ ಹಾರಡ್ಡೆ ನಿವಾಸಿ, ಆಟೋ ಚಾಲಕ ದೇವಪ್ಪ(37) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಅವರು ಅಳದಂಗಡಿ ಸತ್ಯದೇವತೆ ದೈವಸ್ಥಾನದ ಬಳಿ ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದು ಆಟೋ ರಿಕ್ಷಾ ಉರುಳಿಬಿದ್ದಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದೇವಪ್ಪ ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Ads on article

Advertise in articles 1

advertising articles 2

Advertise under the article