-->
ಪಾಲ್ತಾಡಿ ಬಿಲ್ಲವ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ.ಕೆ ನಿಧನ

ಪಾಲ್ತಾಡಿ ಬಿಲ್ಲವ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ.ಕೆ ನಿಧನ


ದ. ಕ ಜಿಲ್ಲೆಯ ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಕಲ್ಲಕಟ್ಟ ನಿವಾಸಿ ರಾಮಚಂದ್ರ (57) ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.

ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾದರು. ಅವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರಗಳನ್ನು ಅಗಲಿದ್ದಾರೆ.

ರಾಮಚಂದ್ರ ಅವರು ಬಿಲ್ಲವ ಗಾಮ ಸಮಿತಿ ಪಾಲ್ತಾಡಿ ಇದರ ಮಾಜಿ ಅಧ್ಯಕ್ಷ ರಾಗಿದ್ದು, ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಗುರುತಿಸಿಕೊಂಡಿದ್ದರು.ಅವರ ಅಗಲುವಿಕೆಗೆ ಸಾಮಾಜಿಕ ಹಾಗು ಧಾರ್ಮಿಕ ಸಂಘಟನೆಯ ಮುಖಂಡರು ಸಂತಾಪ ಸೂಚಿಸಿದ್ದಾರೆ.


Ads on article

Advertise in articles 1

advertising articles 2

Advertise under the article