-->
ಪೆಟ್ರೋಲ್-ಡೀಸಲ್ ದರ ಮತ್ತೆ 1 ರೂ. ಏರಿಕೆ

ಪೆಟ್ರೋಲ್-ಡೀಸಲ್ ದರ ಮತ್ತೆ 1 ರೂ. ಏರಿಕೆ


ದೇಶದಲ್ಲಿ ಮತ್ತೆ ಪೆಟ್ರೋಲ್ - ಡೀಸಲ್ ದರ ಏರಿಕೆಯಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಲೀಟರಿಗೆ ತಲಾ 3 ರೂಪಾಯಿ ಏರಿಕೆ ಕಂಡಿದ್ದ ಪೆಟ್ರೋಲ್ ಡೀಸಲ್ ದರವನ್ನು ಮೇ 19, ಮಂಗಳವಾರ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಮತ್ತೆ ತಲಾ 0.90 ರೂಪಾಯಿ ಏರಿಕೆ ಮಾಡಿ ನಿನ್ನೆ ಮಧ್ಯರಾತ್ರಿ ತೈಲ ಕಂಪೆನಿಗಳು ಆದೇಶ ಹೊರಡಿಸಿವೆ. 

ಈ ಏರಿಕೆಯೊಂದಿಗೆ ಉಡುಪಿಯಲ್ಲಿ ರೂ. 105.67  ಇದ್ದ ಪೆಟ್ರೋಲ್ ದರ ಇಂದಿನಿಂದ ರೂ. 106.61 ಆಗಿದೆ. ಹಾಗೆಯೇ ನಿನ್ನೆಯವರೆಗೆ ರೂ. 93.59 ಇದ್ದ ಡೀಸಲ್ ದರ 94.54 ಆಗಿದೆ.

ಪೆಟ್ರೋಲ್ ಡೀಸಲ್ ದರ ಏರಿಕೆಯೊಂದಿಗೆ ದೇಶದಾದ್ಯಂತ ಸಾರಿಗೆ ದರವೂ ಏರಿಕೆಯಾಗಿದ್ದು, ದಿನಬಳಕೆ ವಸ್ತುಗಳ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ತೈಲ ಬೆಲೆ ಏರಿಕೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Ads on article

Advertise in articles 1

advertising articles 2

Advertise under the article