-->
ಹೆದ್ದಾರಿಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್: ಪ್ರಯಾಣಿಕರು ಪಾರು

ಹೆದ್ದಾರಿಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್: ಪ್ರಯಾಣಿಕರು ಪಾರು


ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನ ಟಯರ್ ಸ್ಫೋಟಗೊಂಡು ಬಸ್ ಸುಟ್ಟು ಭಸ್ಮವಾದ ಘಟನೆ  ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ  ತಡರಾತ್ರಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ನಡೆದಿದ್ದು, ಬಸ್‌ನಲ್ಲಿ 36 ಮಂದಿ ಪ್ರಯಾಣಿಕರಿದ್ದರು. ಟೈರ್ ಸ್ಫೋಟವಾದ ತತ್ ಕ್ಷಣ ಚಾಲಕ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಯಾಣಿಕರೆಲ್ಲರೂ ಕೆಳಗಿಳಿದ ಪರಿಣಾಮ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಂಕಿ ಕ್ಷಣಮಾತ್ರದಲ್ಲಿ ಹೊತ್ತಿಕೊಂಡ ಪರಿಣಾಮ ಪ್ರಯಾಣಿಕರ ಬ್ಯಾಗ್ ಗಳು ಮೊಬೈಲ್‌ಗಳು ಹಾಗೂ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ತತ್ ಕ್ಷಣ ದೌಡಾಯಿಸಿದ್ದಾರೆ. ಹೆದ್ದಾರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಪ್ರಯಾಣಿಕರು ಮತ್ತು ಇತರ ವಾಹನಗಳಲ್ಲಿ ಇದ್ದವರೂ ತೀವ್ರ ಆತಂಕಕ್ಕೀಡಾದರು.



 

Ads on article

Advertise in articles 1

advertising articles 2

Advertise under the article