-->
ಕೊಡವೂರು ಮಹಾರುದ್ರ ಯಾಗ:  ತೋರಣ ಮುಹೂರ್ತ, ಮಹಾರುದ್ರ ಪಠಣ ಆರಂಭ

ಕೊಡವೂರು ಮಹಾರುದ್ರ ಯಾಗ: ತೋರಣ ಮುಹೂರ್ತ, ಮಹಾರುದ್ರ ಪಠಣ ಆರಂಭ


ಕೊಡವೂರು ಶ್ರೀ ಶಂಕರನಾರಾಯಣ ಮಹತೋಭಾರ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಆಯೋಜಿಸಿರುವ ಮಹಾರುದ್ರಯಾಗ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರಕಿತು. 


ಬೆಳಗ್ಗೆ 8.30ಕ್ಕೆ ಋತ್ವಿಜರ ಸ್ವಾಗತ, ಪ್ರಾರ್ಥನೆ, ತೋರಣ ಮುಹೂರ್ತ ನೆರವೇರಿಸಲಾಯಿತು. 

ನಂತರ ಉಗ್ರಾಣ ಮುಹೂರ್ತ, ಅರಣಿ ಮಥನ, ಅಗ್ನಿ ಜನನ, ಬ್ರಹ್ಮಕೂರ್ಚ ಹೋಮ ನೆರವೇರಿತು. ಕಂಕಣ ಬಂಧ, ದ್ವಾದಶ ನಾರಿಕೇಳ ಗಣಯಾಗ ನೆರವೇರಿತು. ಪುರೋಹಿತರಿಂದ ಮಹಾ ರುದ್ರ ಪಠಣ ಆರಂಭಗೊಂಡಿತು.




ಮಧ್ಯಾಹ್ನ 12.30: ಅನ್ನ ಸಂತರ್ಪಣೆ, ಮಧ್ಯಾಹ್ನ 12: ರಮ್ಯಾ ಬೆಳ್ತಂಗಡಿ ಮತ್ತು ತಂಡದಿಂದ ಭಕ್ತಿ ಸಂಗೀತ, ಮಧ್ಯಾಹ್ನ 2.30ರಿಂದ ರುದ್ರ ಜಪ, ಸಂಜೆ 4.30ರಿಂದ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೋಘ್ನ ಹೋಮ ನೆರವೇರಲಿದೆ.

ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ವನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಲಿದ್ದಾರೆ.
ಮಹಾ ರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶ್ರೀ ಮಹರ್ಷಿ ಆನಂದ ಗುರೂಜಿ ಆಶೀರ್ವಚನ ನೀಡುವರು.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಮಾಜಿ ಸಚಿವ ವಿನಯ ಕುಮಾ‌ರ್ ಸೊರಕೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಐಎನ್‌ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಅಶೋಕ್ ಶೆಟ್ಟಿ ಮೈರ್ಮಾಡಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಕೆ. ನಾರಾಯಣ ಬಲ್ಲಾಳ್, ಪದ್ಮನಾಭ ಬಂಗೇರ, ಚಂದ್ರಶೇಖರ್ ಟಿ., ಶಶಿಧರ ಎಂ. ಅಮೀನ್, ರಮೇಶ್ ಮಾಸ್ತರ್ ಕಲ್ಮಾಡಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಸುರೇಂದ್ರ ಉಪಾಧ್ಯ, ಗುರುರಾಜ್ ರಾವ್, ಯಾದವ ಅಮೀನ್, ಜ್ಞಾನೇಶ್ವರ ಕೋಟ್ಯಾನ್, ನರೇಂದ್ರ ಎಂ., ದಾಮೋದರ ಬಂಗೇರ, ಸತೀಶ್ ಬಂಗೇರ, ನವೀನ್ ಕುಂದರ್, ಸುರೇಶ್ ಅಮೀನ್ ಮುಖ್ಯ ಅತಿಥಿಗಳಾಗಿದ್ದಾರೆ. 


Ads on article

Advertise in articles 1

advertising articles 2

Advertise under the article