-->
ಜೂ.7: ಡಾ.ಎಚ್‌.ಜಿ. ಶ್ರೀಧರ ಅವರಿಗೆ ಸಾರ್ವಜನಿಕ ಸನ್ಮಾನ “ಶ್ರೀಧರಾಭಿನಂದನ“

ಜೂ.7: ಡಾ.ಎಚ್‌.ಜಿ. ಶ್ರೀಧರ ಅವರಿಗೆ ಸಾರ್ವಜನಿಕ ಸನ್ಮಾನ “ಶ್ರೀಧರಾಭಿನಂದನ“



ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ಜಿ. ಶ್ರೀಧರ ಅವರಿಗೆ ಅವರ ಶಿಷ್ಯವೃಂದ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ‘ಶ್ರೀಧರಾಭಿವಂದನ’ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವು ಜೂ. 7ರಂದು ಪುತ್ತೂರಿನಲ್ಲಿ ನಡೆಯಲಿದೆ.

ಪುತ್ತೂರು ಬ್ಲಡ್‌ ಬ್ಯಾಂಕ್‌ ಬಳಿಯ ಅನುರಾಗ ವಠಾರದಲ್ಲಿ ಭಾನುವಾರ (ಜೂ.7) ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಡಾ.ನಿರಂಜನ ವಾನಳ್ಳಿ ಉದ್ಘಾಟಿಸಲಿದ್ದಾರೆ. ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುತ್ತೂರು ಉಮೇಶ್‌ ನಾಯಕ್‌, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕೋಶಾಧ್ಯಕ್ಷ ಬಿ.ಐತಪ್ಪ ನಾಯ್ಕ್‌, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್‌ ಉಪಸ್ಥಿತ ಇರಲಿದ್ದಾರೆ.

ಉದ್ಘಾಟನಾ ಸಮಾರಂಭದ ಬಳಿಕ ಡಾ.ಎಚ್‌.ಜಿ.ಶ್ರೀಧರ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ನಡೆಯುವ ಅಭಿವಂದನಾ ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಚ್‌.ಮಾಧವ ಭಟ್‌ ಅಭಿನಂದನಾ ನುಡಿ ಆಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಡಾ.ಎಚ್‌.ಜಿ.ಶ್ರೀಧರ್‌ ಅವರನ್ನು ಸನ್ಮಾನಿಸಲು ಅವಕಾಶವಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article