-->
ಹೊಸ ರಾಜಕೀಯ ಆಂದೋಲನ ಘೋಷಿಸಿದ ಅಣ್ಣಾಮಲೈ

ಹೊಸ ರಾಜಕೀಯ ಆಂದೋಲನ ಘೋಷಿಸಿದ ಅಣ್ಣಾಮಲೈ


ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇದೀಗ ತಮಿಳುನಾಡಿನಲ್ಲಿ ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ್ದಾರೆ. 

ಚೆನ್ನೈಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಹೊಸಬರು ಬರುವಂತಾಗಬೇಕು.ಸಾಮಾನ್ಯ ಜನರಿಗೂ ರಾಜಕೀಯದಲ್ಲಿ ಅವಕಾಶ ಸಿಗುವಂತಾಗಬೇಕು.ಈ ನಿಟ್ಟಿನಲ್ಲಿ ಹೊಸ ರಾಜಕೀಯ ಆಂದೋಲನ ಆರಂಭಿಸಲಾಗುವುದು. ಯಾರ ವಿರುದ್ದವೂ ಆಂದೋಲನ ಅಲ್ಲ. ಹಂತ ಹಂತವಾಗಿ ರಾಜಕೀಯ ಸುಧಾರಣೆಗಾಗಿ ಪ್ರಯತ್ನಿಸುವುದಾಗಿ ತಿಳಿಸಿದರು. 

ಗ್ರಾಮೀಣ ಭಾಗಗಳಿಗೂ ಸೌಕರ್ಯಗಳು ಸಿಗುವಂತಾಗಬೇಕು. ವ್ಯವಸ್ಥೆ ಸುಧಾರಿಸುವುದಕ್ಕಾಗಿ ಆಂದೋಲನ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ಹೇಳಿದರು. ರಾಜಕೀಯ ನಾಯಕರನ್ನು ದೇವರಂತೆ ಅಥವಾ ಸರ್ವೋಚ್ಛ ನಾಯಕರೆಂಬಂತೆ ಬಿಂಬಿಸುವುದು ಕೊನೆಯಾಗಬೇಕು ಎಂದರು. 

ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಮಾನಹಾನಿ ಮಾಡಿ ಪ್ರಯೋಜನವಿಲ್ಲ.ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವವಿದೆ . ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಬಿಜೆಪಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article