-->
 ಮರು ಮೌಲ್ಯಮಾಪನ, ಮರುಪರೀಕ್ಷೆಯಲ್ಲಿ ಧರ್ಮಸ್ಥಳ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್

ಮರು ಮೌಲ್ಯಮಾಪನ, ಮರುಪರೀಕ್ಷೆಯಲ್ಲಿ ಧರ್ಮಸ್ಥಳ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್


ಧರ್ಮಸ್ಥಳದ ಎಸ್‌ಡಿಎಂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಮಾಧುರ್ಯ ಜಿ. ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ಏಪ್ರಿಲ್ 23ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು. ಮಾಧುರ್ಯ ಜಿ. ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಗಳಿಸಿದ್ದರು. ಅವರಿಗೆ ಈ ಫಲಿತಾಂಶದಲ್ಲಿ ಹಿಂದಿಯಲ್ಲಿ 1 ಅಂಕ ಹಾಗೂ ವಿಜ್ಞಾನ ವಿಷಯದಲ್ಲಿ 4 ಅಂಕಗಳು ಕಡಿಮೆ ಬಂದಿದ್ದವು. ಹಿಂದಿ ವಿಷಯದಲ್ಲಿ ಒಂದು ಅಂಕ ಕಡಿಮೆ ಬಂದಿದ್ದಕ್ಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರಿಗೆ ನಿರೀಕ್ಷೆಯಂತೆ 1 ಅಂಕ ಹೆಚ್ಚಳವಾಗಿ ಒಟ್ಟು ಅಂಕ 621ಕ್ಕೇ ಏರಿಕೆಯಾಯಿತು.

ಆದರೆ ವಿಜ್ಞಾನ ವಿಷಯದಲ್ಲಿ ಕಡಿಮೆ ಬಂದಿದ್ದ 4 ಅಂಕಗಳಿಂದ ಅಸಮಾಧಾನಗೊಂಡಿದ್ದ ಅವರು ಆ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಲು ಪರೀಕ್ಷೆ-2ರಲ್ಲಿ ಸುಧಾರಣಾ ಪರೀಕ್ಷೆ ಬರೆಯಲು ನಿರ್ಧರಿಸಿದರು. ವಿಜ್ಞಾನ ವಿಷಯಕ್ಕಾಗಿ ಮತ್ತೊಮ್ಮೆ ಉತ್ತಮ ತಯಾರಿ ನಡೆಸಿ ಪರೀಕ್ಷೆ ಬರೆದ ಮಾಧುರ್ಯ ಈ ಬಾರಿ ವಿಜ್ಞಾನದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದರು. ಇದರೊಂದಿಗೆ ಅವರ ಒಟ್ಟು ಅಂಕಗಳು 625ಕ್ಕೆ 625ಕ್ಕೆ ಏರಿದೆ. 




 

Ads on article

Advertise in articles 1

advertising articles 2

Advertise under the article