ಅಶ್ವಥ ಎಲೆಯಲ್ಲಿ ಮೂಡಿದ ಡಿಕೆಶಿ ಭಾವಚಿತ್ರ: ಕಲಾವಿದ ಗಣೇಶ್ ರಾಜ್ ರ ವಿಶಿಷ್ಟ ಕಲಾಸೃಷ್ಟಿ
Tuesday, June 02, 2026
ನಾಳೆ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಉಡುಪಿ ಜಿಲ್ಲೆಯ ಕಲಾವಿದ ಗಣೇಶ್ ರಾಜ್ ಸರಳೇಬೆಟ್ಟು ತಮ್ಮ ವಿಶಿಷ್ಟ ಕಲಾಕೃತಿಯ ಮೂಲಕ ಗಮನ ಸೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಪ್ರತಿಭಾವಂತ ಕಲಾವಿದ ಗಣೇಶ್ ರಾಜ್ ಸರಳೇಬೆಟ್ಟು ಅವರು ಅಶ್ವಥ ಎಲೆಯ ಮೇಲೆ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ರಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಾರ್ಕೂರಿನ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನದ ವಠಾರದಲ್ಲಿರುವ ಅಶ್ವಥ ಮರದಿಂದ ವಿಶೇಷವಾಗಿ ಎಲೆಯನ್ನು ಆಯ್ದು ತಂದ ಗಣೇಶ್ ರಾಜ್, ಅದರಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ಆಕರ್ಷಕವಾಗಿ ಡಿ.ಕೆ. ಶಿವಕುಮಾರ್ ಅವರ ಮುಖಚಿತ್ರವನ್ನು ಮೂಡಿಸಿದ್ದಾರೆ.
ಕಲಾವಿದರ ಈ ವಿಶಿಷ್ಟ ಕಲಾಕೃತಿ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆ ಗಳಿಸುತ್ತಿದೆ. ರಾಜ್ಯದ ಹೊಸ ನಾಯಕತ್ವಕ್ಕೆ ಶುಭ ಹಾರೈಸುವ ಉದ್ದೇಶದಿಂದ ಈ ಕಲಾಕೃತಿಯನ್ನು ರಚಿಸಲಾಗಿದೆ ಎಂದು ಕಲಾವಿದರು ತಿಳಿಸಿದ್ದಾರೆ.
