ಲಯನ್ಸ್ ಕ್ಲಬ್ ಉಡುಪಿಯ 2026-27ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ
Tuesday, July 07, 2026
ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿಯ 2026-27ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.4 ರಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷ ನಾಗರಾಜ್ ಸಂಕೊಳ್ಳಿ ಹಾಗೂ ಅವರ ತಂಡಕ್ಕೆ ಲಯನ್ಸ್ ಜಿಲ್ಲೆ 317Cಯ ದ್ವಿತೀಯ ಉಪ ಜಿಲ್ಲಾ ಗವರ್ನರ್ ಇಂಜಿನಿಯರ್ ರಮಾನಂದ ಕೆ. ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಅಧ್ಯಕ್ಷರನ್ನು ಮನೋಜ್ ಪ್ರಭು ಅವರು ಸಭೆಗೆ ಪರಿಚಯಿಸಿದರು. ಜಿಲ್ಲಾ ಸಂಪುಟ ಕೋಶಾಧಿಕಾರಿ ವಿನೋದಾ ನಾರಾಯಣ್, ಪ್ರಾಂತ್ಯ 3ರ ಪ್ರಾಂತಾಧ್ಯಕ್ಷ ಲೂಯಿಸ್ ಲೋಬೊ ಶುಭಾಶಂಸನೆಗೈದರು.
ಲಯನ್ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ರತಿಭಾನ್ವಿತ ಮೂರು ವಿದ್ಯಾರ್ಥಿಗಳಿಗೆ ಲಯನ್ಸ್ ಉಪಾಧ್ಯಕ್ಷ ವಿಜಯ ಕುಮಾರ್ ಮುದ್ರಾಡಿ ಪ್ರಾಯೋಜಿಸಿದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಿಸಲಾಯಿತು. ಶಾಲಾ ಸಮವಸ್ತ್ರ ತೆಗೆದುಕೊಳ್ಳಲು SVST ಹೈಸ್ಕೂಲ್ ಕಿದಿಯೂರು ಶಾಲೆಗೆ ಧನ ಸಹಾಯ ಮಾಡಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಡಾ| ಎ. ರವೀಂದ್ರನಾಥ ಶೆಟ್ಟಿ ಅವರು ಪದಗ್ರಹಣ ಅಧಿಕಾರಿ ಇಂಜಿನಿಯರ್ ರಮಾನಂದ್ ಕೆ. ಅವರನ್ನು ಸಮ್ಮಾನಿಸಿದರು. ಹೊಸ ಸದಸ್ಯರಾದ ದೀಪಾ ನಾಯಕ್, ಸದಾಶಿವ ಪ್ರಭು ಹಾಗೂ ಕೆ. ಸಂತೋಷ್ ಶೇಟ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಲಯನ್ಸ್ ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು.
ಕೋಶಾಧಿಕಾರಿ ಸುಪ್ರೀತ್ ಹೆಗ್ಡೆ ಧ್ವಜ ವಂದನೆಗೈದರು. ಪ್ರಮೀಳಾ ರೋಡ್ರಿಗಸ್ ಲಯನ್ಸ್ ನೀತಿ ಸಂಹಿತೆ ವಾಚಿಸಿದರು. ನಿರ್ಗಮನ ಲಯನ್ಸ್ ಕಾರ್ಯದರ್ಶಿ ಡಾ. ರೋಷನ್ ಕುಮಾರ್ ಶೆಟ್ಟಿ ಗತ ವರ್ಷದ ವರದಿ ಮಂಡಿಸಿದರು.
ನಿರ್ಗಮನ ಕೋಶಾಧಿಕಾರಿ ರಮಾನಂದ ಎಲ್.ನಾಯಕ್, ನಿರ್ಗಮನ ಲಿಯೋ ಅಧ್ಯಕ್ಷೆ ಅವನಿ ಕಿಣಿ, ನಿರ್ಗಮನ ಕೋಶಾಧಿಕಾರಿ ಭೂಮಿಕಾ ಎಂ. ನೂತನ ಲಿಯೊ ಅಧ್ಯಕ್ಷೆ ಪೂರ್ವಿಕಾ ಎಂ., ಕಾರ್ಯದರ್ಶಿ ಲಿಯೋನ್ ಕರ್ನೇಲಿಯೊ, ಕೋಶಾಧಿಕಾರಿ ಏಡಲ್ ರೋಷನ್, ಲಯನ್ ಲೇಡಿ ಕೌನ್ಸಿಲ್‌ನ ನಿರ್ಗಮನ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ರಾಧಿಕಾ ಶೆಣೈ, ನಿರ್ಗಮನ ಕೋಶಾಧಿಕಾರಿ ಸುಜಯ ಶೆಟ್ಟಿ, ನೂತನ ಅಧ್ಯಕ್ಷೆ ಭಾರತಿ ನಾಯಕ್, ಕಾರ್ಯದರ್ಶಿ ಅರ್ಚನಾ ರವೀಶ್ ಪೈ, ಕೋಶಾಧಿಕಾರಿ ಸುಮಾ ಮುದ್ರಾಡಿ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಹಾಗೂ ನೂತನ ವಲಯಾಧ್ಯಕ್ಷ ಅಲೆವೂರು ದಿನೇಶ್ ಕಿಣಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್ ವಂದಿಸಿದರು. ರೂಪಾ ಡಿ. ಕಿಣಿ ಹಾಗೂ ಲ್ಯಾನ್ಸಿ ಫೆರ್ನಾಂಡೀಸ್ ನಿರೂಪಿಸಿದರು.


