-->
 ನೀಟ್ ಯುಜಿ 2026 ಪರೀಕ್ಷೆಯಲ್ಲಿ ಉಡುಪಿ ಆಕಾಶ್ ಸಂಸ್ಥೆಯ 9 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್‌

ನೀಟ್ ಯುಜಿ 2026 ಪರೀಕ್ಷೆಯಲ್ಲಿ ಉಡುಪಿ ಆಕಾಶ್ ಸಂಸ್ಥೆಯ 9 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್‌


ಪರೀಕ್ಷಾ ಸಿದ್ಧತೆಯ ಪ್ರಮುಖ ಸಂಸ್ಥೆಯಾದ ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ ಉಡುಪಿ ಶಾಖೆಯ 9 ವಿದ್ಯಾರ್ಥಿಗಳು ನೀಟ್ ಯುಜಿ  2026 ರ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್‌ಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಅದರಲ್ಲಿ ಸಮನ್ವಿ ಮಯ್ಯ ಅವರು ಅಖಿಲ ಭಾರತ ರ‍್ಯಾಂಕ್ (AIR) 3525 ನೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. 


ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ. ಉಡುಪಿ ಶಾಖೆಯಲ್ಲಿ ಸಮನ್ವಿ ಮಯ್ಯ (AIR 3525) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ಪಂಚಮಿ ಎಂ.ಎಸ್. (AIR 17331), ಮಹಮ್ಮದ್ ತಾಲ್ಹಾ (AIR 26479), ನರೇಂದ್ರ ಎಸ್. ಪ್ರಭು (AIR 50906), ದೇವ್ ಶರ್ಮಾ (AIR 57000), ಗ್ರಾಜಿಯಾ ಮಾರಿಯಾ ಬೆನ್ಸನ್ (AIR 60815), ದಿವ್ಯಂ ಹಿತೇಶ್ ಶಾಹ (AIR 72158), ಅನ್ವೇಷಾ ಜಿ. ಪಾಟೀಲ್ (AIR 88326) ಮತ್ತು ಆಯಿಷಾ ಫತೇಅಲಿ ಉಪ್ಪಿನ್ (AIR 89069) ಉನ್ನತ ಸ್ಥಾನ ಗಳಿಸಿದ್ದಾರೆ. 

ರಾಷ್ಟ್ರಮಟ್ಟದಲ್ಲಿ ಆಕಾಶ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.  ತಮ್ಮ ಯಶಸ್ಸಿಗೆ ಆಕಾಶ್ ಸಂಸ್ಥೆಯ ನಿಯಮಿತ ಮಾಕ್ ಟೆಸ್ಟ್‌ಗಳು, ಸಂದೇಹ ಪರಿಹಾರ ಸೆಶನ್‌ಗಳು ಮತ್ತು ಪೋಷಕರು-ಉಪನ್ಯಾಸಕರ ನಿರಂತರ ಬೆಂಬಲವೇ ಕಾರಣ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಶಿಸ್ತು ಮತ್ತು ಸ್ಥಿರತೆಯನ್ನು AESL ನ ಅಕಾಡೆಮಿಕ್ಸ್ ಹಾಗೂ ಬ್ಯುಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ ಶ್ಲಾಘಿಸಿದ್ದಾರೆ.

ಈ ಸಾಧನೆಯನ್ನು ಸಂಭ್ರಮಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಡುಪಿ ಶಾಖೆಯ ಟಾಪರ್ ಆದ ವಿದ್ಯಾರ್ಥಿನಿ ಸಮನ್ವಿ ಮಯ್ಯ ಅವರನ್ನು ಅಭಿನಂದಿಸಿದರು. 



ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ಯಾಮ್ ಪ್ರಸಾದ್, ಶಾಖಾ ಮುಖ್ಯಸ್ಥರಾದ ಪರಮೇಶ್ವರ್, ವೈದ್ಯಕೀಯ ವಿಭಾಗದ ಶೈಕ್ಷಣಿಕ ಮುಖ್ಯಸ್ಥರಾದ ಪ್ರದೀಪ ವಿ. ಸಮಗ ಹಾಗೂ ಉಡುಪಿ ಶಾಖೆಯ ಟಾಪರ್ ಆದ ವಿದ್ಯಾರ್ಥಿನಿ ಸಮನ್ವಿ ಮೈಯ ಅವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article