-->
 ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಉಡುಪಿ ಪೊಲೀಸ್ ಇಲಾಖೆಗೆ 45 ಹೆಲ್ತ್ ಕಿಟ್‌ಗಳ ಕೊಡುಗೆ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಉಡುಪಿ ಪೊಲೀಸ್ ಇಲಾಖೆಗೆ 45 ಹೆಲ್ತ್ ಕಿಟ್‌ಗಳ ಕೊಡುಗೆ


ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಕಸ್ತೂರ್ಬಾ ಮಣಿಪಾಲ್ ಆಸ್ಪತ್ರೆ ಸಮೂಹವು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ 45 ಹೆಲ್ತ್ ಕಿಟ್‌ಗಳನ್ನು ಹಸ್ತಾಂತರಿಸಿತು.


ಜುಲೈ 17ರಂದು ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಸಮ್ಮುಖದಲ್ಲಿ ಕಸ್ತೂರ್ಬಾ ಮಣಿಪಾಲ್ ಆಸ್ಪತ್ರೆ ಸಮೂಹದ ಪ್ರತಿನಿಧಿಗಳು ಹೆಲ್ತ್ ಕಿಟ್‌ಗಳನ್ನು ಹಸ್ತಾಂತರಿಸಿದರು.


ನಂತರ ಈ ಹೆಲ್ತ್ ಕಿಟ್‌ಗಳನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳು, ಪೊಲೀಸ್ ವೃತ್ತ ಕಚೇರಿಗಳು, ಉಪವಿಭಾಗಾಧಿಕಾರಿಗಳ ಕಚೇರಿಗಳು, ಜಿಲ್ಲಾ ಪೊಲೀಸ್ ಕಚೇರಿ, ಡಿಎಆರ್ ಹಾಗೂ ವಿಶೇಷ ಘಟಕಗಳಿಗೆ ವಿತರಿಸಲಾಯಿತು.

ಪ್ರತಿ ಹೆಲ್ತ್ ಕಿಟ್‌ನಲ್ಲಿ ಡಿಜಿಟಲ್ ರಕ್ತದೊತ್ತಡ (BP) ಪರೀಕ್ಷಾ ಯಂತ್ರ, ಡಿಜಿಟಲ್ ರಕ್ತದ ಸಕ್ಕರೆ (ಶುಗರ್) ಪರೀಕ್ಷಾ ಯಂತ್ರ (ಸ್ಟ್ರಿಪ್‌ಗಳೊಂದಿಗೆ) ಹಾಗೂ ಡಿಜಿಟಲ್ ಥರ್ಮೋಮೀಟರ್ ಒಳಗೊಂಡಿವೆ.

ಈ ಹೆಲ್ತ್ ಕಿಟ್‌ಗಳ ಮೂಲಕ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿಕೊಳ್ಳಲು ಅನುಕೂಲವಾಗಲಿದ್ದು, ಆರೋಗ್ಯ ಸಂರಕ್ಷಣೆಗೆ ಇದು ಸಹಕಾರಿಯಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.




Ads on article

Advertise in articles 1

advertising articles 2

Advertise under the article