-->
ಪುಸ್ತಕ ಬಿಟ್ಟು ಗದ್ದೆಗಿಳಿದ ಪುಟಾಣಿಗಳು...ರೈತರೊಂದಿಗೆ ನಾಟಿ ಮಾಡಿದ ಪೋದಾರ್ ಶಾಲಾ ವಿದ್ಯಾರ್ಥಿಗಳು

ಪುಸ್ತಕ ಬಿಟ್ಟು ಗದ್ದೆಗಿಳಿದ ಪುಟಾಣಿಗಳು...ರೈತರೊಂದಿಗೆ ನಾಟಿ ಮಾಡಿದ ಪೋದಾರ್ ಶಾಲಾ ವಿದ್ಯಾರ್ಥಿಗಳು


ಕೃಷಿಯ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಸ್ವತಃ ಗದ್ದೆಗಿಳಿದು ನಾಟಿ ಮಾಡುವ ಕಾರ್ಯದಲ್ಲಿ ಭಾಗವಹಿಸಿದರು. 


ಉಡುಪಿಯ ಮೂಡುಪೆರಂಪಳ್ಳಿಯಲ್ಲಿ ರೈತ ಶಂಕರ್ ಕುಲಾಲ್ ಅವರ ಭತ್ತದ ಗದ್ದೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ರೈತರೊಂದಿಗೆ ಬೆರೆತು ಭತ್ತದ ನಾಟಿ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕೈಯಲ್ಲಿ ಸಸಿ ಹಿಡಿದು ಗದ್ದೆಗೆ ಇಳಿದ ವಿದ್ಯಾರ್ಥಿಗಳು, ಭತ್ತದ ಕೃಷಿಯ ವಿವಿಧ ಹಂತಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಂಡರು. ಆಹಾರ ನಮ್ಮ ಮನೆಗೆ ತಲುಪುವ ಹಿಂದೆ ರೈತರ ಪರಿಶ್ರಮ ಎಷ್ಟಿದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಂಡರು.


ವಿದ್ಯಾರ್ಥಿಗಳು ಭತ್ತದ ಕೃಷಿಯ ವಿವಿಧ ಹಂತಗಳನ್ನು ತಿಳಿದುಕೊಳ್ಳುವುದರೊಂದಿಗೆ, ಆಹಾರ ಉತ್ಪಾದನೆಯ ಹಿಂದಿರುವ ರೈತರ ಕಠಿಣ ಪರಿಶ್ರಮವನ್ನು ನೇರವಾಗಿ ಅನುಭವಿಸಿದರು. ಕೃಷಿಯ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ರೈತರ ಅಮೂಲ್ಯ ಕೊಡುಗೆ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಾಲೆಯ ಪ್ರಾಂಶುಪಾಲೆ ನೇತ್ರಾ ಹೆಚ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದೊಂದಿಗೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ, ಪ್ರಕೃತಿಯ ಬಗ್ಗೆ ಕಾಳಜಿ ಹಾಗೂ ರೈತರ ಬಗ್ಗೆ ಗೌರವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. .


Ads on article

Advertise in articles 1

advertising articles 2

Advertise under the article