ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಪುನರಾಯ್ಕೆ
ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ನೂತನ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಅವರು ಪುನರಾಯ್ಕೆಯಾದರು.
ಆಗಸ್ಟ್ 6ರಂದು ಉಡುಪಿಯ ಹೋಟೆಲ್ ಮಧುರ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆದ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಮಹಾಸಭೆಯಲ್ಲಿ ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್ ರಾಮ್ ಸುಳ್ಯ, ವಿಘ್ನೇಶ್ವರ ಅಡಿಗ, ಆಸ್ಟ್ರೋ ಮೋಹನ್, ಡಾ. ಭಾರ್ಗವಿ ಐತಾಳ್, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣ ಸುವರ್ಣ, ಜನಾರ್ದನ ಕೊಡವೂರು ಹಾಗೂ ಉಮೇಶ್ ನಾಯಕ್ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಎಂ.ಎಸ್. ಭಟ್, ಶಂಕರ ನಾರಾಯಣ ಕೊಡಂಚ ಹಾಗೂ ಮನೋಹರ್ ಶೆಟ್ಟಿ ತೊನ್ಸೆ ನೇಮಕಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಗಳಾಗಿ ಪೂರ್ಣಿಮಾ ಜನಾರ್ದನ್ ಹಾಗೂ ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು ಹಾಗೂ ಸಂಚಾಲಕರಾಗಿ ರವಿರಾಜ್ ಹೆಚ್.ಪಿ. ಆಯ್ಕೆಯಾದರು.
ಸಂಸ್ಥೆಯ ಮಹಾಪೋಷಕರಾಗಿ ಡಾ. ಹರೀಶ್ಚಂದ್ರ, ಸಿ.ಎಸ್. ರಾವ್, ನಾರಾಯಣ ಮಡಿ, ಹಫೀಜ್ ರೆಹಮಾನ್ ಹಾಗೂ ವಿಜಯಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ವಿಶೇಷ ಆಹ್ವಾನಿತರಾಗಿ ಶಂಕರಿ ರಾಮ್ ಭಟ್, ವಿವೇಕಾನಂದ ಎನ್., ಭಾಲಕೃಷ್ಣ ಮುದ್ದೋಡಿ, ಶಾಮಸುಂದರ್, ಕೃಷ್ಣರಾಜ ತಂತ್ರಿ, ಸೋಮನಾಥ್ ಚಿಟ್ಪಾಡಿ, ವಿದ್ಯಾ ಶಾಮಸುಂದರ್, ಸುಮಿತ್ರ ಕೆರೆಮಠ, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ, ಗಣೇಶ್ ಬ್ರಹ್ಮಾವರ, ರಾಘವೇಂದ್ರ ಅಜೇಕಾರ್, ರಂಜಿನಿ ವಸಂತ್, ಅನಂತ ಶೆಣೈ, ವಸಂತ್, ನಂದಾ ಪೇಟ್ಕರ್, ಶೃತಿ ಕಾಶಿ, ಅಮೃತಾ ಆರ್.ಕೆ., ದಯಾನಂದ್, ಚಂದ್ರಕಾಂತ, ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಕೊಡವೂರು, ಶಶಿಕಾಂತ್ ಶೆಟ್ಟಿ, ದೀಪ ಕರ್ಕಿ, ಸುಭೋದ್ ರಾವ್, ನಿತಿನ್ ಕುಕ್ಕಿಕಟ್ಟೆ ಹಾಗೂ ರೇಖಾ ಪೈ ಅವರನ್ನು ಆಯ್ಕೆ ಮಾಡಲಾಯಿತು.