ಲಯನ್ಸ್ ಕ್ಲಬ್ ಕಲ್ಯಾಣಪುರ ವತಿಯಿಂದ ಅಮರವೀರ ಗೀತ ಗಾಯನ ಸ್ಪರ್ಧೆಯ ಕರಪತ್ರ ಬಿಡುಗಡೆ
ಲಯನ್ಸ್ ಕ್ಲಬ್ ಕಲ್ಯಾಣಪುರ ನೇತೃತ್ವದಲ್ಲಿ ಮೂರನೇ ವರ್ಷದ ಅಮರವೀರ ಗೀತಾ ಗಾಯನ ಸ್ಪರ್ಧೆಯ ಕರಪತ್ರ ಬಿಡುಗಡೆ ಕಾರ್ಯಕ್ರಮ ಕಲ್ಯಾಣಪುರ ಮಿಲೆನಿಯಂ ಹಾಲ್ ನಲ್ಲಿ ನಡೆಯಿತು. ಲಯನ್ಸ್ ಜಿಲ್ಲಾ ಪ್ರಥಮ ಉಪಗವರ್ನರ್ ಹರಿಪ್ರಸಾದ್ ರೈ ಕರಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಹಿರಿಯ ವಕೀಲ ಮಟ್ಟಾರ್ ರತ್ನಾಕರ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜನಾರ್ಧನ್ ತೋನ್ಸೆ, ಉದ್ಯಮಿ ಜೋಸೆಫ್ ಮಿನೇಜಸ್, ಪ್ರಾಂತೀಯ ಅಧ್ಯಕ್ಷ ಕರುಣಾಕರ್ ಬಂಗೇರ, ಕಾರ್ಯದರ್ಶಿ ಸುಧಾಕರ್ ಕೋಟ್ಯಾನ್, ವಲಾಯಾಧ್ಯಕ್ಷೆ ಜಯಶ್ರೀ ಪ್ರಶಾಂತ್ ಭಂಡಾರಿ, ಲಯನ್ಸ್ ಕ್ಲಬ್ ಕೆಮ್ಮಣ್ಣು ಅಧ್ಯಕ್ಷ ಜಗದೀಶ್ ಕೆಮ್ಮಣ್ಣು, ಬಿಲ್ಲವರ ಸೇವಾ ಸಂಘ ಹೂಡೆಯ ಅಧ್ಯಕ್ಷ ರತನ್ ಸುವರ್ಣ, ತೇಜಸ್ವಿನಿ ರಾಜ್, ಸುರೇಂದ್ರ ಕೆ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನದ ಅಂಗವಾಗಿ ಬ್ರಹ್ಮಾವರ ಮತ್ತು ಉಡುಪಿ ತಾಲೂಕಿನ ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಯ ಸ್ಪರ್ಧೆ ಇದಾಗಿದ್ದು, ಕಳೆದ ಮೂರು ವರ್ಷಗಳಿಂದ ಲಯನ್ಸ್ ಕ್ಲಬ್ ಕಲ್ಯಾಣಪುರ ಯಶಸ್ವಿಯಾಗಿ ನಡೆಸಿದೆ.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಲ್ಯಾಣ್ಪುರದ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಲಯನ್ ರಿಚರ್ಡ್ ಕ್ರಾಸ್ಟೊ ಸ್ವಾಗತಿಸಿದರೆ, ಕಾರ್ಯದರ್ಶಿ ನಂದಕಿಶೋರ್ ಧನ್ಯವಾದ ಸಮರ್ಪಿಸಿದರು. ರಾಮದಾಸ್ ಶೆಟ್ಟಿಗಾರ್ ಮತ್ತು ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.