-->
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ‘ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸುಸಜ್ಜಿತ ಸಭಾಭವನ’ ಉದ್ಘಾಟನೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ‘ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸುಸಜ್ಜಿತ ಸಭಾಭವನ’ ಉದ್ಘಾಟನೆ


ಶಿಕ್ಷಣ ಇಲಾಖೆಯ ಸಭೆ, ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಎರಡನೇ ಮಹಡಿಯಲ್ಲಿ ಯು.ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ‘ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸುಸಜ್ಜಿತ ಸಭಾಭವನ’ ನಿರ್ಮಾಣಗೊಂಡಿದೆ. ಈ ಸಭಾಭವನದಲ್ಲಿ  ಸುಮಾರು 125 ಮಂದಿಗೆ ಆಸನ ವ್ಯವಸ್ಥೆ ಇದ್ದು ಸುಸಜ್ಜಿತವಾಗಿ ನಿರ್ಮಿಸಲಾಗಿದೆ.


ಸಭಾಭವನವನ್ನು ಚಾರಿಟೇಬಲ್ ಟ್ರಸ್ಟ್  ನ ಟ್ರಸ್ಟಿ ಸೀತಾರಾಮ ನಾಯಕ್ ಸೋಮವಾರ ಉದ್ಘಾಟಿಸಿದರು. ಮುಖ್ಯ ಅತಿಥಿ ಉಡುಪಿ ಶಾಸಕ ಯಶಪಾಲ್ ಎ ಸುವರ್ಣ ಮಾತನಾಡಿ  ಟ್ರಸ್ಟ್ ನ ಸಮಾಜಮುಖಿ ಸೇವಾಕಾರ್ಯವನ್ನು ಶ್ಲಾಘಿಸಿದರು. ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಹಿರಿಯ ಪರಿಸರವಾದಿ ರವೀಂದ್ರನಾಥ ಶ್ಯಾನುಭಾಗ್, ಟ್ರಸ್ಟಿ ಸುರೇಶ ನಾಯಕ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಜೀವವೀಮಾ ನಿಗಮದ ಕಂಡ್ಲೂರು ಪುಂಡಲೀಕ ಪ್ರಭು, ಇಲಾಖಾ ಟಿಪಿಇಒ  ರವೀಂದ್ರ ನಾಯ್ಕ್, ಬಿ ಆರ್ ಸಿ ಸಂಯೋಜಕ, ಶೇಖರ್ ಭೋವಿ, ಕಚೇರಿಯ ಮ್ಯಾನೇಜರ್ ಸಂತೋಷ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಂಜೀವ ನಾಯಕ್, ಕಿರಣ್ ಕುಮಾರ್ ಕಟಪಾಡಿ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article