ಸೆ.10ರಂದು ಉಡುಪಿಯಲ್ಲಿ ‘ಇಂದು ಎನಗೆ ಗೋವಿಂದ’ ಚಿತ್ರದ ವಿಶೇಷ ಪ್ರದರ್ಶನ
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಬೆಂಗಳೂರು ಅರ್ಪಿಸುವ ನಾಡಿನ ಹೆಮ್ಮೆಯ ಸಾಹಿತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ ಆತ್ಮಕಥನ ಚಲನಚಿತ್ರ ‘ಇಂದು ಎನಗೆ ಗೋವಿಂದ’ ವಿಶೇಷ ಪ್ರದರ್ಶನವು ಸೆಪ್ಟೆಂಬರ್ 10ರಂದು ಉಡುಪಿಯಲ್ಲಿ ನಡೆಯಲಿದೆ.
ಉಡುಪಿಯ ಗೀತಾ ಮಂದಿರದ ಪುತ್ತಿಗೆ ಮಠದ ನೃಸಿಂಹ ಹವಾನಿಯಂತ್ರಿತ ಸಭಾಂಗಣದಲ್ಲಿ ಗುರುವಾರ ಮೂರು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಆಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಚಿತ್ರಕ್ಕೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಇದರ ಪ್ರದರ್ಶನ ಇರುವುದಿಲ್ಲ. ಹೀಗಾಗಿ ಸಾಹಿತ್ಯ ಮತ್ತು ಸಿನಿ ಪ್ರೇಮಿಗಳಿಗೆ ಈ ಚಿತ್ರವನ್ನು ವೀಕ್ಷಿಸಲು ಅಪೂರ್ವ ಅವಕಾಶ ದೊರೆತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಚಿತ್ರದ ಮೊದಲ ಪ್ರದರ್ಶನವು ಅಗತ್ಯವಿದ್ದಲ್ಲಿ ಬೆಳಿಗ್ಗೆ 10 ಗಂಟೆಗೆ, ಎರಡನೇ ಪ್ರದರ್ಶನ ಮಧ್ಯಾಹ್ನ 2 ಗಂಟೆಗೆ ಹಾಗೂ ಮೂರನೇ ಪ್ರದರ್ಶನ ಸಂಜೆ 5.30ಕ್ಕೆ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು, ಸಭಾಂಗಣದಲ್ಲಿ ಕೇವಲ 320 ಆಸನಗಳ ವ್ಯವಸ್ಥೆ ಮಾತ್ರ ಇದೆ. ಆಸಕ್ತರು ಕಡ್ಡಾಯವಾಗಿ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.ನೋಂದಣಿ ಲಿಂಕ್:
https://docs.google.com/forms/d/e/1FAIpQLScyf0MDEh4sFm_PpaVRNHg5p8fwtqwfj6SnbR127rfd1pxftA/viewform?usp=publish-editor
ಹೆಚ್ಚಿನ ಮಾಹಿತಿಗಾಗಿ ಆಸ್ಟ್ರೋ ಮೋಹನ್, ಜನಾರ್ದನ ಕೊಡವೂರು ಹಾಗೂ ರವಿರಾಜ್ ಎಚ್.ಪಿ. ಅವರನ್ನು ಸಂಪರ್ಕಿಸಬಹುದು ಎಂದು ಬನ್ನಂಜೆ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.