-->
ಲಕ್ಷ್ಮೀನಗರದಲ್ಲಿ ಶ್ರಮದಾನದ ಮೂಲಕ ಹುಲ್ಲು ಕಟಾವು: ನಂದ ಗೋಕುಲ ಗೋಶಾಲೆಗೆ 150 ಕೆ.ಜಿ. ಹಿಂಡಿ, ಹುಲ್ಲು ಸಮರ್ಪಣೆ

ಲಕ್ಷ್ಮೀನಗರದಲ್ಲಿ ಶ್ರಮದಾನದ ಮೂಲಕ ಹುಲ್ಲು ಕಟಾವು: ನಂದ ಗೋಕುಲ ಗೋಶಾಲೆಗೆ 150 ಕೆ.ಜಿ. ಹಿಂಡಿ, ಹುಲ್ಲು ಸಮರ್ಪಣೆ


ಗೆಳೆಯರ ಬಳಗ (ರಿ.), ಗರ್ಡೇ–ಲಕ್ಷ್ಮೀನಗರ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಅಂಬಾಗಿಲು ವಲಯದ ಸಹಯೋಗದಲ್ಲಿ ಲಕ್ಷ್ಮೀನಗರದ ನಂದ ಗೋಕುಲ ಗೋಶಾಲೆಯಲ್ಲಿ ಗೋಸೇವಾ ಕಾರ್ಯ ನಡೆಯಿತು.


ಕಾರ್ಯಕ್ರಮದ ಅಂಗವಾಗಿ ಸ್ವಯಂಪ್ರೇರಿತ ಶ್ರಮದಾನದ ಮೂಲಕ ಹುಲ್ಲು ಕಟಾವು ಮಾಡಿ ಗೋಶಾಲೆಯಲ್ಲಿರುವ ಗೋವುಗಳಿಗೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ 150 ಕೆ.ಜಿ. ಹಿಂಡಿಯನ್ನು ಗೋಶಾಲೆಗೆ ಹಸ್ತಾಂತರಿಸಲಾಯಿತು.



ಗೋಸೇವಾ ಕಾರ್ಯಕ್ಕೆ ಅಗತ್ಯವಿದ್ದ ವಾಹನದ ವ್ಯವಸ್ಥೆ ಮಾಡಿಕೊಟ್ಟ ಅಶೋಕ್ ಪೂಜಾರಿ ಹಾಗೂ ಮಧುಸೂದನ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ವ್ಯವಸ್ಥೆ ಹಾಗೂ ಸಹಕಾರ ನೀಡಿದ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.

ಗೋಶಾಲೆಗೆ 150 ಕೆ.ಜಿ. ಹಿಂಡಿಯನ್ನು ದೇಣಿಗೆಯಾಗಿ ನೀಡಿದ ಸುಧಾನ್ವಾ ಶೆಟ್ಟಿಗಾರ್, ಕಿಶೋರ್ ಪೂಜಾರಿ ಹಾಗೂ ಅಶೋಕ್ ಪೂಜಾರಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.

ಶೌರ್ಯ ವಿಪತ್ತು ನಿರ್ವಹಣಾ ಘಟಕ, ಅಂಬಾಗಿಲು ವಲಯದ ಸದಸ್ಯರು ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ಮಾಡಿದರು. ಗೋವುಗಳ ಪಾಲನೆ, ಸಂರಕ್ಷಣೆ ಹಾಗೂ ಸೇವೆಯ ಮೂಲಕ ಸಮಾಜದಲ್ಲಿ ಮಾನವೀಯತೆ ಮತ್ತು ಕರುಣೆಯ ಸಂದೇಶ ಸಾರುವ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಯೋಜಕರು ಆಶಿಸಿದರು.

Ads on article

Advertise in articles 1

advertising articles 2

Advertise under the article