-->
 ಶ್ರೀ ಕೃಷ್ಣಾಷ್ಟಮಿ ಸಂಭ್ರಮ: ಸೆ. 3ರಂದು ರಾಜಾಂಗಣದಲ್ಲಿ ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ

ಶ್ರೀ ಕೃಷ್ಣಾಷ್ಟಮಿ ಸಂಭ್ರಮ: ಸೆ. 3ರಂದು ರಾಜಾಂಗಣದಲ್ಲಿ ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ


ಜಗದೊಡೆಯ ಶ್ರೀ ಕೃಷ್ಣನ ಜನ್ಮಾಷ್ಟಮಿ ಸಂಭ್ರಮದ ಅಂಗವಾಗಿ ಸೆಪ್ಟೆಂಬರ್ 3ರಂದು ಸಂಜೆ ಏಳು ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಖ್ಯಾತ ಹಿಂದುಸ್ಥಾನಿ ಗಾಯಕಿ ಕೌಶಿಕಿ ಚಕ್ರವರ್ತಿ ಅವರ ಸಂಗೀತ ಕಚೇರಿ ನಡೆಯಲಿದೆ.

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕೌಶಿಕಿ ಚಕ್ರವರ್ತಿ ಅವರು ದೇಶದ ಹಲವು ಪ್ರತಿಷ್ಠಿತ ಸಂಗೀತ ವೇದಿಕೆಗಳಲ್ಲಿ ತಮ್ಮ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಖಯಾಲ್ ಗಾಯನದ ಜೊತೆಗೆ ಭಾರತೀಯ ಪಾಪ್ ಸಂಗೀತದ ಸಮಕಾಲೀನ ರೂಪಗಳನ್ನೂ ತಮ್ಮ ಪ್ರದರ್ಶನಗಳಲ್ಲಿ ಅಳವಡಿಸಿಕೊಂಡಿರುವ ಅವರು, ತಮ್ಮ ಪ್ರಬುದ್ಧ ಸ್ವರವಿಲಾಸ, ಲಯಬದ್ಧ ಗಾಯನ ಹಾಗೂ ಮೂರೂವರೆ ಸ್ಥಾಯಿಗಳಲ್ಲಿ ನಿರರ್ಗಳವಾಗಿ ತಾನ್‌ಗಳನ್ನು ಹಾಡುವ ಸಾಮರ್ಥ್ಯದಿಂದ ಗಮನ ಸೆಳೆದಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯಲಿರುವ ಕೌಶಿಕಿ ಚಕ್ರವರ್ತಿ ಅವರ ಸಂಗೀತ ಕಚೇರಿಯು ಭಕ್ತರು ಹಾಗೂ ಸಂಗೀತಾಸಕ್ತರಿಗೆ ವಿಶೇಷ ಆಕರ್ಷಣೆಯಾಗಲಿದೆ. ಶ್ರೀ ಕೃಷ್ಣನ ಜನ್ಮೋತ್ಸವದ ಸಂಭ್ರಮಕ್ಕೆ ಶಾಸ್ತ್ರೀಯ ಸಂಗೀತದ ಸೊಬಗು ಮತ್ತಷ್ಟು ಮೆರುಗು ನೀಡಲಿದೆ. 

Ads on article

Advertise in articles 1

advertising articles 2

Advertise under the article