
Bangalore: ಮೇಲ್ಮನೆ ಸದಸ್ಯರಾಗಿ 45 ವರ್ಷ; ಬಸವರಾಜ್ ಹೊರಟ್ಟಿಗೆ ಮಂಜುನಾಥ ಭಂಡಾರಿ ಅಭಿನಂದನೆ
19/08/2025
ವಿಧಾನಮಂಡಲದಲ್ಲಿ ಅತ್ಯಂತ ಹಿರಿಯರಾಗಿ ಸಭಾಪತಿ ಪೀಠದಲ್ಲಿ ಕುಳಿತಿರುವ ಬಸವರಾಜ ಹೊರಟ್ಟಿ ಅವರು ಮೇಲ್ಮನೆ ಸದಸ್ಯರಾಗಿ 45 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಬಸವರಾಜ್ ಹೊರಟ್ಟಿ ಭೇಟಿಯಾಗಿ ಶುಭ ಕೋರಿದರು.
ಸತತವಾಗಿ 8 ಬಾರಿ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಮೇಲ್ಕನೆ ಪ್ರವೇಶಿಸಿದ ಹೊರಟ್ಟಿ 2025ರ ಜೂನ್ 30ರಂದು ಪರಿಷತ್ ಪ್ರವೇಶಿಸಿ ಭರ್ತಿ 45 ವರ್ಷವಾಗಿದೆ. ಶಿಕ್ಷಣ ಕ್ಷೇತ್ರದ ವಿಷಯದಲ್ಲಿ ಧ್ವನಿ ಎತ್ತುತ್ತಾ ಬಂದಿರುವ ಬಸವರಾಜ ಹೊರಟ್ಟಿಯವರು ಮೇಲ್ಮನೆಯಲ್ಲೂ ಕಿರಿಯ ಸದಸ್ಯರಿಗೆ ಶಿಕ್ಷಕರಾಗಿಯೇ ಮಾರ್ಗದರ್ಶನ ಮಾಡುತ್ತ ಬರುತ್ತಿದ್ದಾರೆ. ಪರಿಷತ್ ಸದಸ್ಯರಾಗಿ, ಸಚಿವರಾಗಿ, ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವರ 45ಗಳ ಸುಧೀರ್ಘ ಕಾರ್ಯವೈಖರಿಗೆ ಮಂಜುನಾಥ ಭಂಡಾರಿ ಅಭಿನಂದನೆ ಸಲ್ಲಿಸಿದರು.