
Udupi: ಜೋಡುಕಟ್ಟೆಯ ಅಪಾಯಕಾರಿ ಹೊಂಡಕ್ಕೆ ಮುಕ್ತಿ; ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ
19/08/2025
ಉಡುಪಿಯ ಜೋಡುಕಟ್ಟೆ ಸಮೀಪ ಬಾಯ್ತೆರದುಕೊಂಡಿದ್ದ ಅಪಾಯಕಾರಿ ಗುಂಡಿಗಳನ್ನು ಸ್ಥಳೀಯರಾದ ವೈದ್ಯ ಡಾ. ತಿಲಕ್, ಅರುಣ್ ಶೆಟ್ಟಿಗಾರ್, ನವೀನ್ ಬಿ ಮತ್ತು ಅಜಿತ್ ಶೆಟ್ಟಿ ಎಂಬವರು ಸಂಚಾರಿ ಠಾಣಾ ಎಎಸ್ಐ ವಿಲ್ಫ್ರೆಡ್ ಡಿಸೋಜಾ ಅವರ ಸಹಕಾರದಿಂದ ಮುಚ್ಚಿದ್ದಾರೆ. ಈ ಮೂಲಕ ವಾಹನ ಸವಾರರಿಗೆ ಎದುರಾಗುತ್ತಿದ್ದ ಅಪಾಯವನ್ನು ತಪ್ಪಿಸಿದ್ದಾರೆ.
ಉಡುಪಿ ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯವನ್ನುಂಟು ಮಾಡುತ್ತಿದೆ. ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳಿAದ ಅಪಘಾತಗಳು ಕೂಡಾ ಸಂಭವಿಸಿದೆ. ಉಡುಪಿಯ ಜೋಡುರಸ್ತೆಯಲ್ಲಿ ಕೂಡಾ ಇಂತಹದ್ದೇ ಬಹುದೊಡ್ಡ ಗುಂಡಿ ನಿರ್ಮಾಣವಾಗಿ ಸಮಸ್ಯೆಗಳಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳಾದ ವೈದ್ಯ ಡಾ. ತಿಲಕ್, ಅರುಣ್ ಶೆಟ್ಟಿಗಾರ್, ನವೀನ್ ಬಿ ಮತ್ತು ಅಜಿತ್ ಶೆಟ್ಟಿ ಇವರು ಸಂಚಾರಿ ಪೊಲೀಸರ ಸಹಕಾರದಿಂದ ಗುಂಡಿಗಳನ್ನು ಮುಚ್ಚಿದ್ದಾರೆ. ಈ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.