
Udupi: 216 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆಗೆ ಮುಂದಾದ ಕುವರಿ
19/08/2025
ಮಂಗಳೂರಿನ ರೆಮೊನಾ ಎಂಬ ಭರತನಾಟ್ಯ ಕಲಾವಿದೆ ಸತತ 170 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಮಾಡಿದ ಬೆನ್ನಲ್ಲೇ ಇನ್ನೋರ್ವ ಕರಾವಳಿ ಕುವರಿ ಅಂತಹದ್ದೇ ಸಾಧನೆ ಮಾಡಲು ಮುಂದಾಗಿದ್ದಾರೆ.
ಭರತನಾಟ್ಯದಲ್ಲಿ ವಿದುಷಿ ಪದವಿ ಪಡೆದಿರುವ ಉಡುಪಿಯ ದೀಕ್ಷಾ ವಿ. ಅವರು 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ. ಆಗಸ್ಟ್ 21ರಿಂದ ಆಗಸ್ಟ್ 30ರವರೆಗೆ ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ವಿಶ್ವ ದಾಖಲೆಯ ಪ್ರದರ್ಶನ ನೀಡಲಿದ್ದಾರೆ. ಮಣಿಪಾಲದ ರತ್ನ ಸಂಜೀವ ಕಲಾ ಮಂಡಲದ ವತಿಯಿಂದ ನವರಸ ದೀಕ್ಷಾ ವೈಭವಂ ಎಂಬ ಶೀರ್ಷಿಕೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಉಡುಪಿಯ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿರುವ ದೀಕ್ಷಾ ಅವರು ವಿದ್ವಾನ್ ಶ್ರೀರ‍್ರಾವ್ ಅವರ ಶಿಷ್ಯೆ.