
Udupi: ಹೊಟೇಲ್ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ; ಪ್ರಕರಣ ದಾಖಲು
19/08/2025
ಉಡುಪಿಯ ಹೊಟೇಲ್ ಉದ್ಯಮಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 19ರಂದು ನಡೆದಿದೆ.
ಮೂಲತಃ ಕಾರ್ಕಳ ಬೈಲೂರಿನ ನಿವಾಸಿ, ಪ್ರಸ್ತುತ ಆತ್ರಾಡಿಯಲ್ಲಿ ನೆಲೆಸಿದ್ದ ಕೃಷ್ಣರಾಜ್ ಹೆಗ್ಡೆ(45) ಆತ್ಮಹತ್ಯೆಗೆ ಶರಣಾದವರು. ಆತ್ರಾಡಿಯ ತಮ್ಮ ನಿವಾಸದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಖರ ಕಾರಣ ತಿಳಿದು ಬಂದಿಲ್ಲ. ಕೃಷ್ಣರಾಜ್ ಅವರು ಉಡುಪಿ ಮಣಿಪಾಲದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ