Bangalore: ಸ್ಯಾಂಡಲ್‌ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

Bangalore: ಸ್ಯಾಂಡಲ್‌ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ


ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದಾಗಿ ಆಗಸ್ಟ್ 5ರಂದು ಬೆಳಗ್ಗೆ 9.30ರ ಸುಮಾರಿಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
 


ಹಿರಿಯ ನಿರ್ಮಾಪಕ ಆನೇಕಲ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಕಳೆದ ಒಂದು ತಿಂಗಳ ಹಿಂದೆ ಜಾಂಡೀಸ್‌ನಿ0ದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಗುಣಮುಖರಾಗಿದ್ದರು. ಸಂತೋಷ್ ಬಾಲರಾಜ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂತೋಷ್ ಬಾಲರಾಜ್ ಅವರಿಗೆ ಜಾಂಡೀಸ್ ಖಾಯಿಲೆ ಅವರ ದೇಹವನ್ನೆಲ್ಲ ಆವರಿಸಿತ್ತು. ಕಳೆದ ಎರಡು ದಿನದಿಂದಲೂ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಯಕೃತ್ತು ಮತ್ತು ಕಿಡ್ನಿಯ ಸಮಸ್ಯೆಯಿಂದಾಗಿ ಅವರಿಗೆ ಜಾಂಡೀಸ್ ತಗುಲಿತ್ತು.


ಕರಿಯಾ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.


Ads on article

Advertise in articles 1

advertising articles 2

Advertise under the article