
Bangalore: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಪತ್ನಿ ಸ್ವಪ್ನ ಅರ್ಜಿ
16/08/2025
ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ಅವರ ಪತ್ನಿ ಸ್ವಪ್ನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅಜಯ್ ಪತ್ನಿ ಸ್ವಪ್ನ ದೂರು ದಾಖಲಿಸಿದ್ದು, ಮಗಳು ಚರಿಷ್ಮಾ ಸಹ ದೂರು ನೀಡಿರುವುದಾಗಿ ತಿಳಿದು ಬಂದಿದೆ. 2003ರಲ್ಲಿ ಬಿಡುಗಡೆಯಾದ ಎಕ್ಸ್ಕ್ಯೂಸ್ ಮೀ ಸಿನಿಮಾದ ಮೂಲಕ ಅಜಯ್ ರಾವ್ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 2014ರಲ್ಲಿ ಹೊಸಪೇಟೆಯಲ್ಲಿ ಅಜಯ್ ರಾವ್ ಹಾಗೂ ಸ್ವಪ್ನ ಅವರ ವಿವಾಹ ನಡೆದಿತ್ತು.