
Mangalore: ಧರ್ಮಸ್ಥಳದ ವಿರುದ್ಧ ಅಪಪ್ರಚಾರ; ಹಿಂದೂ ಪರಿಷತ್ ವತಿಯಿಂದ ಪಂಚಾಕ್ಷರಿ ಮಂತ್ರ ಪಠಣ (Video)
18/08/2025
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ವಿರುದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಂಚಾಕ್ಷರಿ ಮಂತ್ರ ಪಠಣ ನಡೆಯಿತು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನದ ವಠಾರದಲ್ಲಿ ಓಂ ನಮ ಶಿವಾಯ ಮಂತ್ರ ಪಠಿಸಲಾಯಿತು. ಡಾ. ಎಂಬಿ ಪುರಾಣಿಕ್ ರವರು ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುವಂತಹ ಷಡ್ಯಂತ್ರದ ಅಪಚಾರವನ್ನು ಹಹಿಸಲು ಸಾಧ್ಯವಿಲ್ಲ, ಅದಕ್ಕೋಸ್ಕರ ಶ್ರೀ ದೇವರ ಮೊರೆ ಹೋಗಿದ್ದೇವೆ, ಶ್ರೀದೇವರ ಕೃಪೆಯಿಂದ ಕ್ಷೇತ್ರಕ್ಕೆ ಬಂದಿರುವಂತಹ ಎಲ್ಲಾ ಕಲಂಕಗಳು ದೂರವಾಗಿ ಸದ್ಯಕ್ಕೆ ಶ್ರದ್ಧೆ ಹೆಚ್ಚಲಿ ಶಾಂತಿ ನೆಲೆಸಲಿ ಎಂದರು.
ಶ್ರೀ ಮಠದ ಪೂಜ್ಯ ಶ್ರೀಗಳು, ಕಟೀಲು ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶ್ರೀ ಹರಿದಾಸ ಅಸರಣ್ಣನವರು, ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಾಂತ ಪ್ರಮುಖರಾದ ಡಾ. ಎಂ ಬಿ ಪುರಾಣಿಕ್, ಶರಣ್ ಪಂಪುವೆಲ್, ಗೋಪಾಲ್ ಕುತ್ತಾರ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ವಿಭಾಗ ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಶಿವಾನಂದ ಮೆಂಡನ್, ಸಂಘ ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತಿ ಇದ್ದರು.