New Delhi: ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ; ಪೊಲೀಸರ ಶೋಧ

New Delhi: ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ; ಪೊಲೀಸರ ಶೋಧ


ರಾಷ್ಟ್ರ ರಾಜಧಾನಿ ದಿಲ್ಲಿಯ ಹಲವಾರು ಶಾಲೆಗಳಿಗೆ ಆಗಸ್ಟ್ 18ರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದ್ವಾರಕಾದ ಸೆಕ್ಟರ್ 10ರಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್), ಮಾಡ್ರನ್ ಕಾನ್ವೆಂಟ್ ಸ್ಕೂಲ್ ಮತ್ತು ಶ್ರೀರಾಮ್ ವರ್ಲ್ಡ್ ಸ್ಕೂಲ್‌ಗೆ ಇಮೇಲ್ ಮೂಲಕ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಂಡಗಳು ಸ್ಥಳಕ್ಕೆ ತೆರಳಿ ಶೋಧ ಕಾರ್ಯಚರಣೆ ಆರಂಭಿಸಿದೆ. ಜುಲೈನಲ್ಲಿ ದಿಲ್ಲಿಯ 45 ಶಾಲೆಗಳು ಮತ್ತು ಮೂರು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿತ್ತು. 

ಕಳೆದ ಮೇ ತಿಂಗಳಲ್ಲಿ ದಿಲ್ಲಿಯ 300 ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿತ್ತು. ಇದೀಗ ಮತ್ತೆ ಬಾಂಬ್ ಬೆದರಿಕೆ ಕರೆಗಳು ಬರಲಾರಂಭಿಸಿದೆ. 

Ads on article

Advertise in articles 1

advertising articles 2

Advertise under the article