
Hassan: ಘಟ್ಟ ಪ್ರದೇಶದಲ್ಲಿ ಭಾರೀ ಮಳೆ, ಅಲ್ಲಲ್ಲಿ ಗುಡ್ಡಕುಸಿತ; ರೈಲು ಸಂಚಾರ ತಾತ್ಕಾಲಿಕ ಸ್ಥಗಿತ
17/08/2025
ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು. ಸಕಲೇಶಪುರ ತಾಲೂಕಿನ ಎಡಕುಮಾರಿ ಬಳಿ ಗುಡ್ಡ ಕುಸಿದಿದೆ. ರೈಲ್ವೇ ಹಳಿ ಮೇಲೆ ಮಣ್ಣು ಕುಸಿತವಾಗಿರುವುದರಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
7 ಕಿಲೋ ಮೀಟರ್ ವ್ಯಾಪ್ತಿಯ 15 ಕಡೆಗಳಲ್ಲಿ ಭೂಕುಸಿತವಾಗಿದ್ದು, ರೈಲ್ವೇ ಹಳಿ ಮೇಲೆ ಭಾರಿ ಪ್ರಮಾಣದ ಮಣ್ಣು ಬಿದ್ದಿದೆ. ಶ್ರೀವಾಗಿಲು-ಯಡಕುಮಾರಿ, ಯಡಕುಮಾರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ- ಡೋಣಿಗಲ್ ವಿಭಾಗಗಳ ರೈಲು ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.