
New Delhi: ಮತಗಳ್ಳತನ ಆರೋಪ ಸಂವಿಧಾನಕ್ಕೆ ಮಾರಕ; ಚುನಾವಣಾಯುಕ್ತ ಜ್ಞಾನೇಶ್ (Video)
17/08/2025
ಮತ ಕಳ್ಳತನದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ.ಚುನಾವಣಾ ಆಯೋಗ ದೇಶದ ಮತದಾರರೊಂದಿಗೆ ದೃಢವಾಗಿ ನಿಲ್ಲುತ್ತದೆ. ಚುನಾವಣಾ ಆಯೋಗ ಸರಕಾರ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಮತಗಳ ಕಳ್ಳತನದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ. ಮತಗಳ ಕಳ್ಳತನ ಆರೋಪಗಳು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಹೇಳಿದರು.