
Hebri: ವಿಷಪೂರಿತ ಹಾವು ಕಡಿತ; 8 ವರ್ಷದ ಬಾಲಕಿ ಸಾವು
04/08/2025
ಹಾವು ಕಡಿದು ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಆಗಸ್ಟ್ 3ರ ಭಾನುವಾರ ಹೆಬ್ರಿಯಲ್ಲಿ ನಡೆದಿದೆ.
ಸನ್ನಿಧಿ (08) ಮೃತಪಟ್ಟ ಬಾಲಕಿ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತಂದೆಯ ಜೊತೆ ತೋಟಕ್ಕೆ ತೆರಳಿದ್ದ ವೇಳೆ ಯಾವುದೋ ವಿಷಕಾರಿ ಹಾವು ಕಚ್ಚಿದೆ. ತಕ್ಷಣ ಓಡಿ ಬಂದು ತಂದೆಯಲ್ಲಿ ಹೇಳಿದಾಗ ಬಲಕಾಲಿನ ಮಣಿಗಂಟಿನ ಬಳಿ ಗಾಯವಾಗಿ ರಕ್ತ ಬರುತ್ತಿತ್ತು.
ಕೂಡಲೇ ಒಂದು ವಾಹನದಲ್ಲಿ ಚಿಕಿತ್ಸೆಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.