
Dharmasthala: 11ನೇ ಪಾಯಿಂಟ್ ನಲ್ಲಿ ಮಾನವ ಅಸ್ತಿಪಂಜರ ಪತ್ತೆ!
04/08/2025
ಧರ್ಮಸ್ಥಳದಲ್ಲಿ ಅನಾಮಧೇಯ ವ್ಯಕ್ತಿಯೋರ್ವರು ಸೂಚಿಸಿದ ಸ್ಥಳದಲ್ಲಿ ಎಸ್.ಐ.ಟಿ. ಮಾರಗದರ್ಶನದಲ್ಲಿ ಶವಗಳನ್ನು
ಹುಡುಕಲು ಅಗೆಯುವ ಕೆಲಸ ಮುಂದುವರಿದಿದ್ದು, ಬಂಗ್ಲಗುಡ್ಡೆಯ 11ನೇ ಪಾಯಿಂಟ್ ನಿಂದ ಸ್ವಲ್ಪ ದೂರದಲ್ಲಿ ಮಾನವ ಅಸ್ಥಿಪಂಜರ ದೊರೆತಿರುವುದಾಗಿ ತಿಳಿದು ಬಂದಿದೆ. ಅನಾಮಧೇಯ ದೂರುದಾರ 11ನೇ ಪಾಯಿಂಟ್ ನಿಂದ ಅನತಿ ದೂರಕ್ಕೆ ಪೊಲೀಸ್ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ಅಗೆಯುವಂತೆ ಹೇಳಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಎಸ್.ಐ.ಟಿ. ಸ್ಥಳಕ್ಕೆ ಉಪ್ಪಿನ ಮೂಟೆ ತರಿಸಿಕೊಂಡಿದ್ದರೂ, ಅಸ್ಥಿಪಂಜರ ದೊರೆತಿರುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಸ್ಥಿಪಂಜರ ದೊರೆತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.