
J & K: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಪೋಟ; 7 ಮಂದಿ ಬಲಿ
17/08/2025
ಕಳೆದ ಶನಿವಾರ ಹಾಗೂ ಭಾನುವಾರದ ನಡುವೆ ಜಮ್ಮು ಕಾಶ್ಮೀರದ ಕಥುವ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮೇಘ ಸ್ಪೋಟ ಹಾಗೂ ಭಾರೀ ವರ್ಷಧಾರೆಗೆ ಏಳು ಮಂದಿ ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದು, ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೋಧ್ ಘಾಟಿ ಗ್ರಾಮದ ರಾಜ್ ಭಾಗ್ ಹಾಗೂ ಜಾಂಗ್ಲೋಟ್ ಎಂಬಲ್ಲಿ ಈ ಪ್ರಕೃತಿ ಸಂಭವಿಸಿದೆ. ರಾಜ್ ಭಾಗ್ ನಲ್ಲಿ ಶನಿವಾರ ರಾತ್ರಿ ನಡೆದ ಮೇಘ ಸ್ಪೋಟಕ್ಕೆ ಐವರು ಬಲಿಯಾಗಿದ್ದು, ಭಾರೀ ಮಳೆಗೆ ಜಾಂಗ್ಲೋಟ್ ನಲ್ಲಿ ಗುಡ್ಡಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವರು ಮಣ್ಣಿನಡಿ ಸಿಲುಕಿ ನಾತ್ತೆಯಾಗಿದ್ದಾರೆ.