Karkala: ಚಿರನಿದ್ರೆಗೆ ಜಾರಿದ ಕಂಬಳ ಕರೆಯ "ಚೆನ್ನ"; ಕಂಬಳಾಭಿಮಾನಿಗಳ ಕಂಬನಿ (Video)

Karkala: ಚಿರನಿದ್ರೆಗೆ ಜಾರಿದ ಕಂಬಳ ಕರೆಯ "ಚೆನ್ನ"; ಕಂಬಳಾಭಿಮಾನಿಗಳ ಕಂಬನಿ (Video)


ಕ0ಬಳ ಕೂಟದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದ ಕಾರ್ಕಳ ಕೊಳಚೂರು ಕೊಂಡೆಟ್ಟು "ಚೆನ್ನ" ಇಹಲೋಕದ ಪಯಣ ಮುಗಿಸಿದ್ದಾನೆ. ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಕೊಳಚೂರು ಕೊಂಡಟ್ಟು ಸುಕುಮಾರ್ ಶೆಟ್ಟಿ ಅವರ ಚೆನ್ನ ಕೋಣ ಆಗಸ್ಟ್ 14ರಂದು ಸಂಜೆ ಇಹಲೋಕ ತ್ಯಜಿಸಿದೆ


ಚಿರನಿದ್ರೆಗೆ ಜಾರಿದ ಚೆನ್ನನಿಗೆ ಸಕಲ ವಿಧಿ ವಿಧಾನಗಳ ಮೂಲಕ ಅಂತಿಮ ವಿದಾಯ ಹೇಳಲಾಯಿತು. ಸಂಜೆ ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು, 


ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಚೆನ್ನನನ್ನು 22 ವರ್ಷಗಳ ಹಿಂದೆ ಶಾಂತರಾಮ ಶೆಟ್ಟಿ ಅವರು ತಮ್ಮ ಹಟ್ಟಿಗೆ ಕರೆತಂದಿದ್ದರು. ಅಲ್ಲಿಂದ ಕಂಬಳದ ಅಗ್ರ ಗಣ್ಯ ಕೋಣನಾಗಿ ಮಿಂಚಿದ್ದ ಚೆನ್ನ ಬಳಿಕ ಕೊಂಡಟ್ಟು ಸುಕುಮಾರ ಶೆಟ್ಟಿ ಅವರ ಚೆನ್ನನಾಗಿ ಕಂಬಳ ಓಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾನೆ. ನಾಲ್ಕು ಬಾರಿ ಸರಣಿ ಪ್ರಶಸ್ತಿ ಪಡೆದಿರುವ ಚೆನ್ನ ಸತತ 13 ವರ್ಷ ಪದಕ ಗೆದ್ದ ಸಾಧಕನೆಂಬ ಬಿರುದೂ ಇದೆ, ಇಹಲೋಕ ತ್ಯಜಿಸಿದ ಚೆನ್ನನಿಗಾಗಿ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


 





Ads on article

Advertise in articles 1

advertising articles 2

Advertise under the article