
Kaup: ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಧರಣಿ; ಮೊಂಬತ್ತಿ ಹಿಡಿದು ಆಕ್ರೋಶ (Video)
14/08/2025
ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾನದಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ಪೇಟೆಯಲ್ಲಿ ಮೊಂಬತ್ತಿ ಹಿಡಿದು ಧರಣಿ ನಡೆಸಲಾಯಿತು.
ಈ ವೇಳೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಮುಖರಾದ ನವೀನ್ ಚಂದ್ರ ಜೆ. ಶೆಟ್ಟಿ, ಕಾಪು ದಿವಾಕರ್ ಶೆಟ್ಟಿ, ಗೋಪಾಲ ಪೂಜಾರಿ ಪಲಿಮಾರು, ಶಾಂತಲತಾ ಶೆಟ್ಟಿ, ಮಾಧವ ಪಾಲನ್, ಮೊಹಮ್ಮದ್ ಸಾದಿಕ್, ಅಮೀರ್ ಕಾಪು, ಸುಧೀರ್ ಕರ್ಕೇರ, ಅಬ್ದುಲ್ ಅಝೀಜ್ ಹೆಜಮಾಡಿ,ಪ್ರಭಾಕರ ಆಚಾರ್ಯ ಕಟಪಾಡಿ, ಶೋಭಾ ಬಂಗೇರ,ಕೆ. ಎಚ್. ಉಸ್ಮಾನ್, ಪ್ರಭಾಕರ್ ಪೂಜಾರಿ, ಯು. ಸಿ. ಶೇಖಬ್ಬಾ, ಮಹೇಶ್ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.