79ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಂಗಳೂರು ನಗರದಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಯಿತು. ಮಂಗಳೂರಿನ ನವಭಾರತ ಸರ್ಕಲ್ನಿಂದ ಅಂಬೇಡ್ಕರ್ ವೃತ್ತ, ಕ್ಲಾಕ್ ಟವರ್ ಮಾರ್ಗವಾಗಿ ಮಂಗಳೂರು ಪುರಭವನದವರೆಗೆ ಪಥ ಸಂಚಲನ ನಡೆಸಲಾಯಿತು. ಮಂಗಳೂರು ನಗರ ಪೊಲೀಸ್ ಹಾಗೂ ವಿಶೇಷ ಪಡೆಯಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.