
Manipal: ಮಾಹೆ ಸ್ವಯಂಸೇವಕ ಸಂಘಟನೆಯಿಂದ 'ಸಸ್ಯ ಶ್ಯಾಮಲಾ'
07/08/2025
ಸೆ. 17ರಂದು ಮಣಿಪಾಲದಲ್ಲಿ ನಡೆಯಲಿರುವ 'ಬದಲಾವಣೆಯಲ್ಲಿ ಯುವಜನರು' ಎಂಬ ರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಮಾಹೆಯ ಸ್ವಯಂಸೇವಾ ಸೇವಾ ಸಂಘಟನೆ (ವಿ.ಎಸ್.ಒ.) ವತಿಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ 'ಸಸ್ಯ ಶ್ಯಾಮಲಾ' ಎಂಬ ಪರಿಸರ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
110ಕ್ಕೂ ಅಧಿಕ ವಿದ್ಯಾರ್ಥಿ ಸ್ವಯಂಸೇವಕರು ಶಿವಾಪುರ ಗ್ರಾಮದಲ್ಲಿ 2 ಕಿ.ಮೀ ರಸ್ತೆಯುದ್ದಕ್ಕೂ 600ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರದ ರಕ್ಷಣೆಗಾಗಿ ಕೈಜೋಡಿಸಿದರು.
ಈ ಸಮ್ಮೇಳನದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳು, ರಾಷ್ಟ್ರಮಟ್ಟದ ಪೋಸ್ಟರ್ ಪ್ರದರ್ಶನ ಸ್ಪರ್ಧೆಗಳು ಹಾಗೂ ಸ್ವಯಂಸೇವಕ, ಇಂಟರ್ನ್‌ಶಿಪ್ ಮತ್ತು ಫೆಲೋಶಿಪ್ ಅವಕಾಶಗಳನ್ನು ಒದಗಿಸುವ ಎನ್‌ಜಿಒಗಳೊಂದಿಗೆ ಸಂಪರ್ಕ ಅವಕಾಶಗಳಿರುತ್ತವೆ.
ವಿ.ಎಸ್.ಒ. ಮುಖ್ಯ ಸಂಯೋಜಕ ಡಾ. ಅಭಿಷೇಕ್ ಚತುರ್ವೇದಿ ಅವರ ನೇತೃತ್ವದಲ್ಲಿ ಈ ಗಿಡ ನೆಡುವ ಕಾರ್ಯಕ್ರಮ ನಡೆದಿದ್ದು ಅವರು ವಿವಿಧ ವಿಭಾಗಗಳ ಮತ್ತು ಶೈಕ್ಷಣಿಕ ಹಂತಗಳ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಈ ಸಮಗ್ರ ಸಸಿ ನೆಡುವ ಕಾರ್ಯಕ್ರಮವನ್ನು ಸಂಯೋಜಿಸಿದರು.