Udupi: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ ಸಂಪನ್ನ
07/08/2025
ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆದ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನಡೆದು ಭಜನಾ ಮಂಗಳೋತ್ಸವ ಸಂಪನ್ನಗೊಂಡಿತು.
ವಿನಾಯಕ್ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿ ದೇವರಿಗೆ ಮಹಾ ಪೂಜೆ ನೆರವೇರಿಸಿದರು. ಅರ್ಚಕರಾದ ದಯಾಘಾನ್ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು. ಭಕ್ತರು ಮಂಗಳಾಚರಣೆ, ಮಡಸ್ತಾನ ಸೇವೆ (ಭಕ್ತರಿಂದ ಉರುಳು ಸೇವೆ), ಮೊಸರು ಕುಡಿಕೆ, ತೆಪ್ಪಂಗಾಯಿ ಸೇವೆಯಲ್ಲಿ ಭಾಗವಹಿಸಿದರು.
ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಆಡಳಿತ ಮಂಡಳಿಯ ಸದಸ್ಯರು ಹಾಗೂ ಜಿಎಸ್ ಬಿ ಯುವಕ ಮಂಡಳಿ ಸದಸ್ಯರು ಭಾಗವಹಿಸಿದ್ದರು.