
Mumbai: "3 ಈಡಿಯಟ್ಸ್" ಖ್ಯಾತಿಯ ನಟ ಅಚ್ಯುತ ಪೋತ್ದಾರ್ ನಿಧನ
19/08/2025
ಮರಾಠಿ ಹಾಗೂ ಹಿಂದಿ ಚಿತ್ರರಂಗದ ಹಿರಿಯ ನಟ ಅಚ್ಯುತ ಪೋತ್ದಾರ್(91) ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅಚ್ಯುತ ಅವರು ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಾಲ್ಕು ದಶಕಗಳಿಂದ ಮನರಂಜನಾ ಕ್ಷೇತ್ರದಲ್ಲಿದ್ದ ಅವರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂನ್ ಆತಾ ಹೈ, ಅರ್ಧ್ ಸತ್ಯ, ತೇಜಾಬ್, ಪರಿಂದಾ, ದಬಾಂಗ್ 2 ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 3 ಈಡಿಯಟ್ಸ್ ಸಿನಿಮಾದಲ್ಲಿ ಶಿಸ್ತಿನ ಪ್ರಾಧ್ಯಾಪಕರಾಗಿ ನಟಿಸಿ, ಜನಪ್ರಿಯರಾಗಿದ್ದರು.