
Udupi: ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಾಮಾನ್ಯ ಸಭೆ
14/08/2025
ಉಡುಪಿ ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಸಾಮಾನ್ಯ ಸಭೆಯು ಉಡುಪಿ ಸಹಕಾರಿಯ ಮುಖ್ಯ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಆರ್.ವಿ. ಕುಂದರ್ ಮಾತನಾಡಿ, ಸಂಘವು ಸತತವಾಗಿ ಲಾಭದೊಂದಿಗೆ ಮುನ್ನಡೆಯಲು ಹಾಗೂ ಅಭಿವೃದ್ಧಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ವಾರ್ಷಿಕ ವರ್ಷದಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಸಿಬ್ಬಂದಿ,ನಿರ್ದೇಶಕರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸರಿತ, ಉಪಾಧ್ಯಕ್ಷರಾದ ಪ್ರಶಾಂತ್. ಎಸ್, ನಿರ್ದೇಶಕ ಅಶೋಕ್ ಸೇರಿಗಾರ್, ಜಲಜ.ಕೆ, ಮಾಧವ, ನಯನ ದಾಸ್, ರಾಮ ಶೇರಿಗಾರ್, ನಾರಾಯಣ್, ಪ್ರಕಾಶ್ ಕುಂದರ್, ಶಿವಾನಂದ್, ಅಮಿತ, ಚಿತ್ರಾಕ್ಷಿ ಉಪಸ್ಥಿತರಿದ್ದರು.