
Udupi:ರಾಜಣ್ಣ ಪುತ್ರನಿಗೆ ಸಚಿವ ಸ್ಥಾನ- ಹೈಕಮಾಂಡ್ ತೀರ್ಮಾನ ಅಂತಿಮವೆಂದ ಹೆಬ್ಬಾಳ್ಕರ್
14/08/2025
ಕಾಂಗ್ರೆಸ್ ಹೈಕಮಾಂಡ್ ಇರುವ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜಣ್ಣ ಅವರ ಸ್ಥಾನವನ್ನು ಅವರ ಪುತ್ರ ರಾಜೇಂದ್ರ ಅವರಿಗೆ ನೀಡುವ ಒತ್ತಡ ಕೇಳಿ ಬಂದಿರುವ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪ್ರತಿಕ್ರಿಯಿಸಿದರು.