ಜ.18- 21 "ಕರಾವಳಿ ನಿರ್ದಿಗಂತ" ಉದ್ಘಾಟನೆ; ಮಕ್ಕಳ ನಾಟಕ ಪ್ರದರ್ಶನ
Thursday, January 08, 2026
ಸಾಹಿತ್ಯ, ಕಲೆ ಮತ್ತು ರಂಗಭೂಮಿಯOತಹ ವಿವಿಧ ಕಲೆಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ಆರಂಭಿಸಿರುವ ನಿರ್ದಿಗಂತ ತಂಡ ಇದೀಗ ಕರಾವಳಿಗೂ ಕಾಲಿಟ್ಟಿದೆ. ಕರಾವಳಿ ನಿರ್ದಿಗತ ತಂಡವು ಜ. 18ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜ. 18ರಂದು ಸಂಜೆ 6 ಗಂಟೆಗೆ ಸಾಹಿತಿ ಫಕೀರ್ ಮಹಮಮದ್ ಕಟಪಾಡಿ ಕರಾವಳಿಯ ನಿರ್ದಿಗಂತವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಎಚ್.ಎಸ್ ವೆಂಕಟೇಶ್ ಮೂರ್ತಿ ರಚಿಸಿ, ರೋಹಿತ್ ಬೈಕಾಡಿ ನಿರ್ದೇಶಿಸಿರುವ ಕುಣಿ ಕುಣಿ ನವಿಲೇ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ. ಜ. 19ರಂದು ಸಂಜೆ 6.30ರಿಂದ ಸಂಗಮ ಕಲಾವಿದೆರ ಮಣಿಪಾಲ ಇವರಿಂದ ಬೀಚಿ ಮತ್ತು ಶ್ರೀನಿವಾಸ ಐದ್ಯರ ಲೇಖನಗಳಾಧಾರಿತ ನಾಟ ದೇವರ ಆತ್ಮಹತ್ಯೆ ಪ್ರದರ್ಶನಗೊಳ್ಳಲಿದೆ. ಜ. 20ರಂದು ಸಂಜೆ ಲೋಹಿಯಾ ಲೇಖನಾಧಾರಿತ ನಾಟಕ ರಾಮ, ಕೃಷ್ಣ, ಶಿವ ಪ್ರದರ್ಶನಗೊಳ್ಳಲಿದೆ. ಜ.21ರಂದು ಸಂಜೆ 6 ಗಂಟೆಗೆ ಪ್ರಕಾಶ್ ರಾಜ್ ಹಾಗೂ ನಿರ್ದಿಗಂತ ತಂಡದಿOದ ಸಮಸತೆಯ ಹಾಡು, ಸಂಜೆ 7.15ರಿಂದ ದಾರಿಯೋ ಪೋ ಅವರ ಕಾಂಟ್ ಪೇ ವೋಂಟ್ ಪೇ ಆಧಾರಿತ ನಾಟಕ "ಕೊಡಲ್ಲ ಅಂದ್ರ ಕೊಡಲ್ಲ" ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಿರ್ದಿಗಂತ ತಂಡದ ರಾಜು ಮಣಿಪಾಲ, ಗಣೇಶ ಮಂದಾರ್ತಿ, ಅನುಷ್ ಶೆಟ್ಟಿ ಮೊದಲಾದವರು ಇದ್ದರು.