ಕೋಲ್ಕತ್ತಾ ಐಪಿಎಸಿ ಕಚೇರಿ, ಟಿಎಂಸಿ ಐಟಿ ಮುಖ್ಯಸ್ಥರ ಮನೆ ಮೇಲೆ ಈಡಿ ದಾಳಿ
Thursday, January 08, 2026
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬOಧಿಸಿದOತೆ ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಟಿಎಂಸಿ ಐಟಿ ವಿಭಾಗದ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಈಡಿ ದಾಳಿ ಬಗ್ಗೆ ಮಾಹಿತಿ ಬಂದ ತಕ್ಷಣ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈನ್ ನಿವಾಸಕ್ಕೆ ತೆರಳಿದ್ದಾರೆ. ಐ-ಪಿಎಸಿ ಕಚೇರಿ ಮೇಲಿನ ದಾಳಿಯನ್ನು ಬೆದರಿಕೆಯ ಕೃತ್ಯ ಎಂದ ಮಮತಾ ಬ್ಯಾನರ್ಜಿ, ಇದು ಕಾನೂನು ಜಾರಿಯಲ್ಲ, ಇದು ರಾಜಕೀಯ ಸೇಡು. ಗೃಹ ಸಚಿವರು ದೇಶವನ್ನು ರಕ್ಷಿಸುವವರಂತೆ ಅಲ್ಲ, ಅತ್ಯಂತ ನೀಚ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು. ಈ ದಾಳಿಯನ್ನು ಅತ್ಯಂತ ದುರದೃಷ್ಟಕರ ಎಂದ ಮಮತಾ ಬ್ಯಾನರ್ಜಿ, ರಾಜಕೀಯ ಪಕ್ಷಗಳ ಐಟಿ ಮುಖ್ಯಸ್ಥರ ನಿವಾಸಗಳ ಮೇಲೆ ದಾಳಿ ಮಾಡುವುದು ಕೇಂದ್ರ ಗೃಹ ಸಚಿವರ ಕೆಲಸವೇ ಎಂದು ಪ್ರಶ್ನಿಸಿದ್ದಾರೆ.