ಶೀರೂರು ಶ್ರೀಗಳಿಂದ ಪೂರ್ವಾಶ್ರಮದ ಮನೆಯಲ್ಲಿ ಸಂಸ್ಥಾನ ಪೂಜೆ
Thursday, January 15, 2026
ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೀಠವೇರುವ ಮುನ್ನ ತನ್ನ ಪೂರ್ವಾಶ್ರಮದ ಮನೆಗೆ ಭೇಟಿ ನೀಡಿ ಸಂಸ್ಥಾನ ಪೂಜೆ ಮತ್ತು ಮನೆ ದೇವರಿಗೆ ಪೂಜೆ ಸಲ್ಲಿಸಿದರು.
ಉಡುಪಿಯ ಅಲೆವೂರಿನಲ್ಲಿರುವ ಮನೆಗೆ ಆಗಮಿಸಿದ ಶ್ರೀಗಳನ್ನು ಮನೆಯವರು ಹಾಗೂ ಬಂಧುಗಳು ಆದರದಿಂದ ಬರಮಾಡಿಕೊಂಡು ಗೌರವಿಸಿದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ದಂಪತಿಗಳು ಹಾಗೂ ಶ್ರೀಗಳ ಪೂರ್ವಾಶ್ರಮದ ಮನೆಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
.jpeg)