ವಲಸೆ ಕಾರ್ಮಿಕನಿಗೆ ಹಲ್ಲೆ ಪ್ರಕರಣ; ಮತ್ತೋರ್ವನ ಬಂಧನ
Thursday, January 15, 2026
ಬಾಂಗ್ಲಾ ಪ್ರಜೆಯೆಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಹಲ್ಲೆಗೈದ ಮತ್ತೋರ್ವ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಕೂಳೂರು ನಿವಾಸಿ ಮೋಹನ್ ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬOಧಿಸಿ ಈಗಾಗಲೇ ಕೂಳೂರಿನ ರತೀಶ್ ದಾಸ್(32), ಧನುಷ್(24) ಹಾಗೂ ಸಾಗರ್(24) ಎಂಬವರನ್ನು ಬಂಧಿಸಲಾಗಿದೆ. ಜ.11ರಂದು ಸಂಜೆ ಕೆಲಸ ಮುಗಿಸಿ ತೆರಳುತ್ತಿದ್ದ ಜಾರ್ಖಂಡ್ ಮೂಲದ ಕಾರ್ಮಿಕನನ್ನು ತಡೆದು ಬಾಂಗ್ಲಾದೇಶಿ ಎಂದು ನಿಂದಿಸಿ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮತ್ತೋರ್ವನ ಬಂಧನದ ಮೂಲದ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದOತಾಗಿದೆ.